ADVERTISEMENT

ತಂದೆ ಆಗುತ್ತಿರುವ ಸಂಭ್ರಮದಲ್ಲಿ ನಟ ಡಾಲಿ ಧನಂಜಯ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2026, 7:27 IST
Last Updated 24 ಜನವರಿ 2026, 7:27 IST
<div class="paragraphs"><p>ನಟ ಡಾಲಿ ಧನಂಜಯ್,&nbsp;ಡಾ. ಧನ್ಯತಾ</p></div>

ನಟ ಡಾಲಿ ಧನಂಜಯ್, ಡಾ. ಧನ್ಯತಾ

   

ಚಿತ್ರ: ಇನ್‌ಸ್ಟಾಗ್ರಾಂ

ಚಂದನವನದ ನಟ ಡಾಲಿ ಧನಂಜಯ್‌ ಮತ್ತು ಧನ್ಯತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರದ ಬಗ್ಗೆ ಖುದ್ದು ನಟ ಡಾಲಿ ಧನಂಜಯ್‌ ಅವರು ‘ಉದಯ ಕನ್ನಡಿಗ 2025’ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ADVERTISEMENT

‘ಉದಯ ಕನ್ನಡಿಗ 2025’ ಕಾರ್ಯಕ್ರಮಕ್ಕೆ ಆಗಮಿಸಿದ ನಟ ಡಾಲಿ ಧನಂಜಯ್‌ ತಂದೆಯಾಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ವೇದಿಕೆಗೆ ಆಗಮಿಸಿದ ನಟ ‘ಒಂದು ಗುಲಾಬಿ ಹೆಂಡ್ತಿಗೆ, ಇನ್ನೊಂದು ನನ್ನ ಅಪ್ಪ ಅಂತ ಕರಿಯೋಕೆ ಬರ್ತಿರೋ ಮಗುಗೆ’ ಎಂದು ಹೇಳುವ ಮೂಲಕ ತಂದೆ ಆಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ನಟ ಡಾಲಿ ಧನಂಜಯ್, ಡಾ. ಧನ್ಯತಾ

2025ರ ಫೆಬ್ರುವರಿ 16ರಂದ ನಟ ಡಾಲಿ ಧನಂಜಯ್ ಅವರು ವೈದ್ಯೆ ಡಾ. ಧನ್ಯತಾ ಅವರೊಂದಿಗೆ ಮೈಸೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.