ADVERTISEMENT

ದಬಾಂಗ್‌– 3ರಲ್ಲಿ ಸಾಯಿ ಮಂಜ್ರೇಕರ್‌

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:45 IST
Last Updated 17 ಜುಲೈ 2019, 19:45 IST
ಸಾಯಿ
ಸಾಯಿ   

ದಬಾಂಗ್‌ 3ಯಲ್ಲಿ ಸಲ್ಮಾನ್ ಖಾನ್‌ ಅವರು ನಿರ್ದೇಶಕ ಮಹೇಶ್‌ ಮಂಜ್ರೇಕರ್‌ ಅವರ ಕಿರಿಯ ಮಗಳ ಜೊತೆ ರೊಮ್ಯಾನ್ಸ್‌ ಮಾಡಲಿದ್ದಾರೆ.

ಈ ಹಿಂದೆ ಮಂಜ್ರೇಕರ್‌ ಅವರ ಹಿರಿ ಮಗಳು ಅಶ್ವಮಿ ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಗಾಳಿ ಸುದ್ದಿ ಹರಡಿತ್ತು. ಆದರೆ ಅಶ್ವಮಿ ಈ ಚಿತ್ರದಲ್ಲಿ ನಟಿಸುತ್ತಿಲ್ಲ, ಅವರ ತಂಗಿ ಸಾಯಿ ಮಂಜ್ರೇಕರ್‌ ಅವರು ಸಲ್ಮಾನ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ.

ಮೂಲಗಳ ಪ್ರಕಾರ, ಸಿನಿಮಾದಲ್ಲಿ ಸಲ್ಮಾನ್‌ ಅವರು ಯುವಕನಾಗಿದ್ದಾಗ ನಡೆಯುವ ಪ್ರೇಮ ಪ್ರಸಂಗದ ಭಾಗದಲ್ಲಿ ಸಾಯಿ ಜೋಡಿಯಾಗಿ ನಟಿಸಲಿದ್ದಾರೆ. ಬಳಿಕ ಮದುವೆಯಾದ ನಂತರದ ಭಾಗದಲ್ಲಿ ‍ಪತ್ನಿ ಪಾತ್ರವನ್ನು ಸೋನಾಕ್ಷಿ ಸಿನ್ಹಾ ನಿರ್ವಹಿಸಲಿದ್ದಾರೆ. ಸಲ್ಮಾನ್‌– ಸಾಯಿ ಜೋಡಿಯ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಇದರಲ್ಲಿ ಹಾಡು ಕೂಡ ಸೇರಿದೆ.ದಬಾಂಗ್‌–3, 2020ರ ಡಿಸೆಂಬರ್‌ 20ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಬಳಿಕಸಂಜಯ್‌ ಲೀಲಾ ಬನ್ಸಾಲಿ ಅವರ ‘ಇನ್ಶಾ ಅಲ್ಲಾಹ್‌’ ಚಿತ್ರದಲ್ಲಿ ಸಲ್ಮಾನ್‌ ನಟಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.