ADVERTISEMENT

‘ದೈವ’ ಸಿನಿಮಾದ ‘ರಾವಣಾಸುರಂ’ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 23:52 IST
Last Updated 12 ಜನವರಿ 2026, 23:52 IST
ಎಂ.ಜೆ.ಜಯರಾಜ್‌
ಎಂ.ಜೆ.ಜಯರಾಜ್‌   

ಎಂ.ಜೆ.ಜಯರಾಜ್‌ ನಿರ್ದೇಶಿಸಿ, ನಾಯಕರಾಗಿ ನಟಿಸಿರುವ ‘ದೈವ’ ಸಿನಿಮಾದ ‘ರಾವಣಾಸುರಂ’ ಹಾಡು ಇತ್ತೀಚೆಗೆ ಕಲ್ಪವೃಕ್ಷ ಕ್ರಿಯೇಷನ್ಸ್ ಯುಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. 

ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಜಯಮ್ಮ ಪದ್ಮರಾಜ್ ಈ ಸಿನಿಮಾವನ್ನು ನಿರ್ಮಿಸಿದ್ದು, ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ.ಪಟ್ಟಣಶೆಟ್ಟಿ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. 

‘ಇದೊಂದು ಪಕ್ಕಾ ದೇಸಿ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಜೋಗಯ್ಯನ ಪಾತ್ರದಲ್ಲಿ ಎರಡು ಗೆಟಪ್‌ಗಳಲ್ಲಿ ಜಯರಾಜ್‌ ಕಾಣಿಸಿಕೊಂಡಿದ್ದಾರೆ’ ಎಂದಿದೆ ಚಿತ್ರತಂಡ. ನಾಯಕನ ಪರಿಚಯಿಸುವ ‘ರಾವಣಾಸುರಂ’ ಹಾಡಿಗೆ ಮೂರ್ತಿ ಟಿ.ಎಂ. ಸಾಹಿತ್ಯವಿದ್ದು, ಅನಿರುದ್ಧ ಶಾಸ್ತ್ರಿ ಮತ್ತು ವಿಜೇತ ಮಂಜಯ್ಯ ಹಾಡಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡಿಗೆ ವಿನಯ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ADVERTISEMENT

ಈಗಾಗಲೇ ಚಿತ್ರೀಕರಣ ಮುಗಿಸಿರುವ ‘ದೈವ’ ಚಿತ್ರ ಸದ್ಯದಲ್ಲೇ ಪ್ರೇಕ್ಷಕರ ಎದುರು ಬರಲಿದೆ. ಚಿತ್ರಕ್ಕೆ ಸಿದ್ಧಾರ್ಥ್ ಎಚ್.ಆರ್. ಛಾಯಾಚಿತ್ರಗ್ರಹಣವಿದ್ದು, ಸುರಭಿ, ನೀತು ರಾಯ್, ಬಲ ರಾಜವಾಡಿ, ಮಂಜುರಾಜ್ ಸೂರ್ಯ, ಅರುಣ್ ಬಚ್ಚನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.