ಚಿತ್ರ: milananagaraj
ಸ್ಯಾಂಡಲ್‌ವುಡ್ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮಗಳು ಪರಿ ಅಪ್ಪನ ಹಾಡಿಗೆ ಮುದ್ದಾಗಿ ಡ್ಯಾನ್ಸ್ ಮಾಡಿದ್ದಾಳೆ. ಬೆಡ್ ಮೇಲೆ ಪುಟಾಣಿ ಪರಿ ಕುಣಿದು ಕುಪ್ಪಳಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಗಳು ಪರಿ ಡ್ಯಾನ್ಸ್ ಮಾಡುತ್ತಿರೋ ಮುದ್ದಾದ ವಿಡಿಯೊವನ್ನು ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಸಿನಿಮಾದ ‘ಗಂಗಿ ಗಂಗಿ..’ ಸಾಂಗ್ ರಿಲೀಸ್ ಆಗಿದೆ.
ಇದೇ 'ಗಂಗಿ.. ಗಂಗಿ' ಹಾಡಿನಲ್ಲಿ ಅಪ್ಪನ ಡ್ಯಾನ್ಸ್ ಅನ್ನು ಲ್ಯಾಪ್ ಟಾಪ್‌ನಲ್ಲಿ ನೋಡುತ್ತಾ ಬೆಡ್ ಮೇಲೆ ಕುಣಿದಿದ್ದಾಳೆ. ಇತ್ತೀಚೆಗೆ ನಟ ಡಾರ್ಲಿಂಗ್ ಕೃಷ್ಣ ದಂಪತಿ ಮಗಳು ಪರಿಯ ಒಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಅದ್ಧೂರಿ ಹುಟ್ಟುಹಬ್ಬದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈಗ ಪರಿ ಕ್ಯೂಟ್ ಆಗಿ ಡ್ಯಾನ್ಸ್ ಮಾಡಿದ ವಿಡಿಯೋ ನೋಡುಗರ ಕಣ್ಮನ ಸೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.