ನಟ ದರ್ಶನ್,ರಚನಾ ರೈ
ಚಿತ್ರ: ಇನ್‌ಸ್ಟಾಗ್ರಾಮ್
ನಟ ದರ್ಶನ್ ಹಾಗೂ ರಚನಾ ರೈ ಅಭಿನಯದ ಡೆವಿಲ್ ಸಿನಿಮಾದ ‘ಒಂದೇ ಒಂದು ಸಲ’ ಹಾಡು ಅಕ್ಟೋಬರ್ 10ರಂದು ಬಿಡುಗಡೆಯಾಗಿತ್ತು. ಒಂದೇ ಒಂದು ಸಲ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಡೆವಿಲ್ ಸಿನಿಮಾನಲ್ಲಿ ದರ್ಶನ್‌ಗೆ ನಾಯಕಿಯಾಗಿ ರಚನಾ ರೈ ನಟಿಸಿದ್ದಾರೆ. ಒಂದೇ ಒಂದು ಸಲ ಹಾಡು ಬಿಡುಗಡೆಯಾದ ಬೆನ್ನಲ್ಲೆ ನಟಿ ರಚನಾ ರೈ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ದರ್ಶನ್ ಜೊತೆಗಿನ ತೆರೆ ಹಿಂದಿನ ಚಿತ್ರೀಕರಣದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ದರ್ಶನ್ ಬಗ್ಗೆ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ನಟಿ ರಚನಾ ರೈ ಹೇಳಿದ್ದೇನು?
‘ನಿಮ್ಮಂತ ಸೂಪರ್‌ಸ್ಟಾರ್ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಪುಣ್ಯ. ಚಿತ್ರೀಕರಣದ ವೇಳೆ ನಿಮ್ಮ ಏಕಾಗ್ರತೆ, ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆ, ಪಾತ್ರಗಳಿಗೆ ಜೀವ ತುಂಬುವ ನಿಮ್ಮ ಉತ್ಸಾಹ ನೋಡುವುದೇ ನನಗೆ ಒಂದು ಪಾಠವಾಗಿತ್ತು. ನಾನು ಇದುವರೆಗೆ ಕಂಡ ಅತ್ಯಂತ ಸಹನೆಯ ವ್ಯಕ್ತಿಗಳಲ್ಲಿ ನೀವು ಕೂಡ ಒಬ್ಬರು. ಬೀಚ್‌ನಲ್ಲಿ ಶೂಟಿಂಗ್ ಮಾಡುವುದು ತಮಾಷೆಯ ಮಾತಲ್ಲ. ಒಬ್ಬ ಅದ್ಭುತ ಸಹನಟ ಆಗಿದ್ದಕ್ಕೆ ನಿಮಗೆ ಧನ್ಯವಾದಗಳು. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅದ್ಭುತ ವ್ಯಕ್ತಿಯಾಗಿ ನನ್ನ ಜೊತೆಗಿದ್ದಿದ್ದಕ್ಕೆ ನಿಮಗೆ ಧನ್ಯವಾದಗಳು. ಅದ್ಭುತ ತಂಡಕ್ಕೆ, ನಿಮ್ಮ ಕಠಿಣ ಪರಿಶ್ರಮ ಸಮರ್ಪಣೆ ಮತ್ತು ಕ್ಯಾಮೆರಾದ ಹಿಂದಿನ ಉತ್ಸಾಹ ಈ ಹಾಡನ್ನು ಮಾಂತ್ರಿಕಗೊಳಿಸಿದೆ’ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದಿ ಡೆವಿಲ್ ಸಿನಿಮಾದ ಹಾಡುಗಳ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಡೆದಿದೆ. ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ಜೆ.ಜಯಮ್ಮ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ರಚನಾ ರೈ ನಟಿಸಿದ್ದು, ತುಳಸಿ, ಅಚ್ಯುತ್ ಕುಮಾರ್, ಮಹೇಶ್ ಮಂಜೇಕರ್, ಶ್ರೀನಿವಾಸಪ್ರಭು, ಶೋಭರಾಜ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಡಿಸೆಂಬರ್12ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಸದ್ಯ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.