ADVERTISEMENT

‘ಯಜಮಾನ’ನ ಎರಡನೇ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 10:10 IST
Last Updated 19 ಜನವರಿ 2019, 10:10 IST
   

‘‍ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ನಟನೆಯ ‘ಯಜಮಾನ’ ಚಿತ್ರ ಚಂದನವನದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದ ‘ಶಿವನಂದಿ...' ಹಾಡಿಗೆ ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದರು. ಈ ಸಾಂಗ್‌ ಸತತ ಮೂರು ದಿನಗಳ ಕಾಲ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು.

ಈ ಹಾಡಿಗೆಸಿಕ್ಕಿದ ಅದ್ಭುತ ಯಶಸ್ಸಿನ ನಂತರ ಎರಡನೇ ಹಾಡು ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ‘ಒಂದು ಮುಂಜಾನೆ...’ ಹಾಡು ಮೆಲೋಡಿಯಾಗಿದೆ.

‘ಶಿವನಂದಿ ಹಾಡಿಗೆ ನೀವು ತೋರಿಸಿರುವ ಪ್ರೀತಿಗೆ ನಾ ಆಭಾರಿಯಾಗಿದ್ದೇನೆ. ಈಗ ಯಜಮಾನ ಚಿತ್ರದ 2ನೇ ಹಾಡು- ‘ಒಂದು ಮುಂಜಾನೆ’ ಮೆಲೋಡಿ ನಿಮಗಾಗಿ. ಕೇಳಿ ನಿಮ್ಮ ಅನಿಸಿಕೆ ತಿಳಿಸಲು ಮರೆಯದಿರಿ’ ಎಂದು ದರ್ಶನ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.