ADVERTISEMENT

ಲಂಡನ್ ಲೀಸೆಸ್ಟರ್ ಸ್ಕ್ವೇರ್‌ನಲ್ಲಿ DDLJ ರಾಜ್–ಸಿಮ್ರಾನ್ ಕಂಚಿನ ಪ್ರತಿಮೆ!

ಲೀಸೆಸ್ಟರ್ ಸ್ಕ್ವೇರ್‌ನಲ್ಲಿ ಭಾರತೀಯ ಸಿನಿಮಾದ ಪಾತ್ರಗಳ ಪ್ರತಿಮೆ ಇದೇ ಮೊದಲ ಬಾರಿಗೆ ಅನಾವರಣವಾಗಿದೆ.

ಪಿಟಿಐ
Published 5 ಡಿಸೆಂಬರ್ 2025, 6:09 IST
Last Updated 5 ಡಿಸೆಂಬರ್ 2025, 6:09 IST
<div class="paragraphs"><p>ಲಂಡನ್ ಲೀಸೆಸ್ಟರ್ ಸ್ಕ್ವೇರ್‌ನಲ್ಲಿ DDLJ ರಾಜ್–ಸಿಮ್ರಾನ್ ಕಂಚಿನ ಪ್ರತಿಮೆ!</p></div>

ಲಂಡನ್ ಲೀಸೆಸ್ಟರ್ ಸ್ಕ್ವೇರ್‌ನಲ್ಲಿ DDLJ ರಾಜ್–ಸಿಮ್ರಾನ್ ಕಂಚಿನ ಪ್ರತಿಮೆ!

   

ಲಂಡನ್: ಆದಿತ್ಯ ಚೋಪ್ರಾ ನಿರ್ದೇಶನದ ಬಾಲಿವುಡ್‌ನ ಸೂಪರ್‌ಹಿಟ್‌ ಸಿನಿಮಾ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ (DDLJ) ಬಿಡುಗಡೆಯಾಗಿ 30ನೇ ವರ್ಷದ ಸಂಭ್ರಮಾಚರಣೆ ಕಂಡಿದೆ.

ಈ ಹಿನ್ನೆಲೆಯಲ್ಲಿ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾದ ಪಾತ್ರಗಳಾದ ರಾಜ್ ಹಾಗೂ ಸಿಮ್ರಾನ್ ಅವರ ಪಾತ್ರಗಳ ಕಂಚಿನ ಪ್ರತಿಮೆಗಳನ್ನು ಲಂಡನ್‌ನ ಲೀಸೆಸ್ಟರ್ ಸ್ಕ್ವೇರ್‌ನಲ್ಲಿ Heart of London Business Alliance ಸಂಸ್ಥೆಯ ವತಿಯಿಂದ ಅನಾವರಣಗೊಳಿಸಲಾಗಿದೆ.

ADVERTISEMENT

ಪ್ರತಿಮೆಯನ್ನು ರಾಜ್ ಹಾಗೂ ಸಿಮ್ರಾನ್ ಪಾತ್ರ ಮಾಡಿದ್ದ ನಟ ಶಾರುಕ್ ಖಾನ್ ಹಾಗೂ ಕಾಜಲ್ ಅವರು ಇತ್ತೀಚೆಗೆ ಅನಾವರಣ ಮಾಡಿದರು.

ಈ ವೇಳೆ ಶಾರುಕ್ ಮಕ್ಕಳು, ಕಾಜಲ್ ಮಕ್ಕಳು ಹಾಗೂ ಚಿತ್ರ ತಂಡದ ಅನೇಕ ಸದಸ್ಯರು ಮತ್ತು Heart of London Business Alliance ಸಂಸ್ಥೆಯ ಅಧಿಕಾರಿಗಳು ಇದ್ದರು.

ಈ ಕುರಿತು ಶಾರುಕ್ ಖಾನ್ ಹಾಗೂ ಕಾಜಲ್ ಅವರು ತಮ್ಮ ಸಾಮಾಜಿಕ ತಾಣಹಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಇದೊಂದು ಅವಿಷ್ಮರಣೀಯ ಘಳಿಗೆ. ಲೀಸೆಸ್ಟರ್ ಸ್ಕ್ವೇರ್‌ನಲ್ಲಿ ಭಾರತೀಯ ಸಿನಿಮಾದ ಪಾತ್ರಗಳ ಪ್ರತಿಮೆ ಇದೇ ಮೊದಲ ಬಾರಿಗೆ ಅನಾವರಣವಾಗಿದೆ. ಲಂಡನ್‌ನಲ್ಲಿರುವ ಭಾರತೀಯರಿಂದ ಇದೆಲ್ಲ ಸಾಧ್ಯವಾಗಿದೆ. ಲಂಡನ್‌ಗೆ ಬಂದಾಗ ರಾಜ್–ಸಿಮ್ರಾನ್‌ರನ್ನು ಮರೆಯದೇ ಭೇಟಿಯಾಗಿ ಎಂದು ಧನ್ಯವಾದ ಸಲ್ಲಿಸಿದ್ದಾರೆ.

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾ ಯಶ್‌ ರಾಜ್ ಬ್ಯಾನರ್ ಅಡಿ 1995 ರಲ್ಲಿ ಬಿಡುಗಡೆಯಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.