ADVERTISEMENT

ತಮಿಳು ನಟಿ ಪಾಲಿನ್ ಜೆಸ್ಸಿಕಾ ಆತ್ಮಹತ್ಯೆ: ಪ್ರೇಮ ವೈಫಲ್ಯದ ಶಂಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2022, 14:35 IST
Last Updated 18 ಸೆಪ್ಟೆಂಬರ್ 2022, 14:35 IST
ಪಾಲಿನ್ ಜೆಸ್ಸಿಕಾ
ಪಾಲಿನ್ ಜೆಸ್ಸಿಕಾ   

ಚೆನ್ನೈ; ತಮಿಳು ನಟಿ ದೀಪಾ ಆಕಾ (ಪಾಲಿನ್ ಜೆಸ್ಸಿಕಾ, 29 ವಯಸ್ಸು) ಭಾನುವಾರ ಚೆನ್ನೈನ ವೀರುಗಾಂಬಿಕಾಂ ನಗರದಲ್ಲಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ದೀಪಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ದೀಪಾ ಅವರು ನಾಸಿರ್ ಮುಖ್ಯಪಾತ್ರದಲ್ಲಿದ್ದ ‘ವೈದಾ‘ ಸಿನಿಮಾದಲ್ಲಿ ನಾಯಕಿಯಾಗಿದ್ದರು. ‘ಥುಪ್ಪಾರುವಿಲನ್‘ ಸೇರಿದಂತೆ ಕೆಲ ಚಿತ್ರಗಳಲ್ಲಿ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ್ದರು.

ತಮಿಳು ಚಿತ್ರ ಸಾಹಿತಿ ಕಾಬಿಲನ್ ಅವರ ಪುತ್ರಿ ಕೂಡ ಕಳೆದ ಐದು ದಿನದ ಹಿಂದೆ ಪ್ರೇಮ ವೈಪಲ್ಯದಿಂದ ಮೃತಪಟ್ಟಿದ್ದರು ಎಂದು ಇಂಡಿಯಾ ಗ್ಲಿಟ್ಜ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.