ADVERTISEMENT

ಪ್ರಭಾಸ್‌ ನಟನೆಯ ‘ಸ್ಪಿರಿಟ್‌‘ ಸಿನಿಮಾ ತಂಡದಿಂದ ಹೊರಬಂದ ದೀಪಿಕಾ ಪಡುಕೋಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 10:15 IST
Last Updated 22 ಮೇ 2025, 10:15 IST
<div class="paragraphs"><p>ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ</p></div>

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

   

ಬೆಂಗಳೂರು: ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿರುವ ‘ಸ್ಪಿರಿಟ್‌‘ ಸಿನಿಮಾ ತಂಡದಿಂದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹೊರ ಬಂದಿದ್ದಾರೆ.

‘ಸ್ಪಿರಿಟ್‌‘ ಸಿನಿಮಾದಲ್ಲಿ ಪ್ರಭಾಸ್‌ ನಾಯಕ ನಟನಾಗಿ, ದೀಪಿಕಾ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ ಎಂದು ಚಿತ್ರತಂಡ ಘೋಷಣೆ ಮಾಡಿತು. ಇದೀಗ ದೀಪಿಕಾ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈಗಾಗಲೇ ‘ಸ್ಪಿರಿಟ್‌‘ ಸಿನಿಮಾದ ಕೆಲಸಗಳು ಆರಂಭವಾಗಿದ್ದು ನಿರ್ದೇಶಕ ಸಂದೀಪ್ ರೆಡ್ಡಿ ಸಂಗೀತ ಸಂಯೋಜನೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ವೇಳೆ ದೀಪಿಕಾ ಹೊರಬಂದಿರುವುದರಿಂದ ಮತ್ತೆ ನಾಯಕಿಯನ್ನು ಹುಡುಕುವ ಕೆಲಸ ಅವರ ಹೆಗಲಿಗೆ ಬಿದ್ದಿದೆ.

ಸಂಭಾವನೆ ಮತ್ತು ಕಥೆಯ ವಿಷಯಕ್ಕೆ ನಿರ್ದೇಶಕರ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ದೀಪಿಕಾ ಈ ಯೋಜನೆಯಿಂದ ಹೊರಬಂದಿದ್ದಾರೆ. ಈ ಹಿಂದೆ ಅವರಿಗೆ ₹ 20 ಕೋಟಿ ಸಂಭಾವನೆ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.