ADVERTISEMENT

ವಿಚ್ಛೇದನ ಬೆನ್ನಲ್ಲೇ ಕೌಟುಂಬಿಕ ಹಿಂಸಾಚಾರದ ಕುರಿತ ಹಾಡು ಬಿಡುಗಡೆ ಮಾಡಿದ ಧನಶ್ರೀ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2025, 5:09 IST
Last Updated 22 ಮಾರ್ಚ್ 2025, 5:09 IST
<div class="paragraphs"><p>ಧನಶ್ರೀ ವರ್ಮಾ</p></div>

ಧನಶ್ರೀ ವರ್ಮಾ

   

ಮುಂಬೈ: ಸೋಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ ಮತ್ತು ನೃತ್ಯ ನಿರ್ದೇಶಿಕ ಧನಶ್ರಿ ವರ್ಮಾ ಗುರುವಾರ ಹೊಸ ಆಲ್ಬಂವೊಂದನ್ನು ಬಿಡುಗಡೆ ಮಾಡಿದ್ದು, ವಿವಾಹೇತರ ಸಂಬಂಧ, ಕೌಟುಂಬಿಕ ಹಿಂಸಾಚಾರದ ಬಲಿಯಾಗುವ ಹೆಣ್ಣಿನ ಕುರಿತ ಹಾಡು ಇದಾಗಿದೆ.

‘ದೇಖಾ ಜಿ ದೇಖಾ ಮೇ‘ ಶೀರ್ಷಿಕೆಯ ಈ ಹಾಡಿನಲ್ಲಿ ಧನಶ್ರೀ ಅವರು ಕೌಟುಂಬಿಕ ದೌರ್ಜನ್ಯಕ್ಕೊಳಗಾಗುವ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟಿಗ ಯಜುವೇಂದ್ರ ಚಹಲ್‌ ಅವರೊಂದಿಗೆ ಅಧಿಕೃತವಾಗಿ ವಿಚ್ಚೇದನ ಪಡೆದ ದಿನವೇ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ADVERTISEMENT

ಹೊಸ ಹಾಡಿನ ಪರಿಕಲ್ಪನೆ ಬಗ್ಗೆ ಧನಶ್ರೀ ಅವರು ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಹಾಡಿನ ಮೂಲಕ ತಮ್ಮ ಹಿಂದಿನ ವೈವಾಹಿಕ ಜೀವನದ ಅನುಭವಿಸಿದ ನೋವನ್ನು ಪರೋಕ್ಷವಾಗಿ ತೋರಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಜ್ಯೋತಿ ನೂರಾನ್ ಅವರು ಈ ಹಾಡಿಗೆ ದನಿ ನೀಡಿದ್ದು, ಜಾನಿ ಅವರು ಸಂಗೀತ ಸಂಯೋಜಿಸುವುದರ ಜೊತೆಗೆ ಸಾಹಿತ್ಯವನ್ನು ಬರೆದಿದ್ದಾರೆ. ಭೂಷಣ್‌ ಕುಮಾರ್ ಒಡೆತನದ ಟಿ–ಸೀರಿಸ್‌ನಲ್ಲಿ ಹಾಡು ಬಿಡುಗಡೆಯಾಗಿದೆ.

ರಾಜಸ್ಥಾನದ ಸೆಟ್‌ವೊಂದರಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಹಾಡಿನಲ್ಲಿ ಧನಶ್ರೀ ವರ್ಮಾ ಅವರೊಂದಿಗೆ ಪಾತಾಳ್‌ ಲೋಕ್‌ ಖ್ಯಾತಿಯ ನಟ ಇಶ್ವಕ್‌ ಸಿಂಗ್‌ ಕಾಣಿಸಿಕೊಂಡಿದ್ದಾರೆ.

ಏನತ್ಮಧ್ಯೆ, ಧನಶ್ರೀ ವರ್ಮಾ ಮತ್ತು ಚಹಲ್‌ ಅವರು ತಮ್ಮ ದಾಂಪತ್ಯ ಜೀವನವನ್ನು ಅಧಿಕೃತವಾಗಿ ಅಂತ್ಯಗೊಳಿಸಿದ್ದಾರೆ. ವರ್ಮಾ ಅವರಿಗೆ ₹4.75 ಕೋಟಿ ಜೀವನಾಂಶ ನೀಡಲು ಚಹಲ್ ಅವರು ಒಪ್ಪಿಕೊಂಡಿದ್ದಾರೆ. ಈ ಜೋಡಿ 2020ರ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.