ಚೆನ್ನೈ:ದಕ್ಷಿಣ ಭಾರತದಖ್ಯಾತ ನಟ ಧನುಷ್ ಹೊಸ ತಮಿಳು ಹಾಗೂ ತೆಲುಗು ಭಾಷೆಸಿನಿಮಾದಲ್ಲಿ ನಟಿಸುವ ಘೋಷಣೆ ಮಾಡಿದ್ದಾರೆ.
ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರನಿರ್ಮಾಣವಾಗುತ್ತಿದೆ. ಇದಕ್ಕೆ ತಮಿಳಿನಲ್ಲಿ ‘ವಾತಿ’ ಹಾಗೂ ತೆಲುಗಿನಲ್ಲಿ ‘ಸರ್’ ಎಂದು ಹೆಸರಿಡಲಾಗಿದೆ. ಧನುಷ್ ಅವರು ಸಿನಿಮಾದ ಪೋಸ್ಟರ್ಗಳು ಹಾಗೂ ಟೈಟಲ್ ಟೀಸರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಧನುಷ್ ಅವರ ನೂತನ ಸಿನಿಮಾಗೆ ಅಭಿಮಾನಿಗಳು, ಗೆಳೆಯರು, ಉದ್ಯಮಿಗಳು ಹಾಗೂ ಸಿನಿರಂಗದ ಗಣ್ಯರು ಶುಭ ಹಾರೈಸಿದ್ದಾರೆ.
ಸೂರ್ಯದೇವ ನಾಗ ವಂಶಿ ಹಾಗೂ ಸೌಜನ್ಯ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಖ್ಯಾತನಿರ್ದೇಶಕ ವೆಂಕಿ ಅಟ್ಲುರಿ ಈ ಚಿತ್ರವನ್ನುನಿರ್ದೇಶನ ಮಾಡುತ್ತಿದ್ದಾರೆ. ಶಿಕ್ಷಣ ಕುರಿತಾದ ಈ ಸಿನಿಮಾ ಸಾಮಾನ್ಯ ವ್ಯಕ್ತಿಯ ಮಹತ್ವಾಕಾಂಕ್ಷೆಯನ್ನು ಹೇಳುತ್ತದೆ ಎಂದು ಚಿತ್ರತಂಡ ಹೇಳಿದೆ.
ಧನುಷ್ಗೆ ನಾಯಕಿಯಾಗಿ ಸಂಯುಕ್ತಾ ಮೆನನ್ ನಟಿಸುತ್ತಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ದಿನೇಶ್ ಕೃಷ್ಣನ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಜನವರಿಯಲ್ಲಿ ನಡೆಯಲಿದೆ.
ಧನುಷ್ ನಟಿಸಿರುವ ‘ಅತರಂಗಿ ರೇ’ ಬಾಲಿವುಡ್ ಸಿನಿಮಾ ಕ್ರಿಸ್ಮಸ್ಗೆ ಬಿಡುಗಡೆಯಾಗಲಿದೆ. ಈಗಾಗಲೇ ಧನುಷ್ ಮಲಯಾಳಂ, ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.