
ಧುರಂದರ್
ನವದೆಹಲಿ: ರಣವೀರ್ ಸಿಂಗ್ ನಟನೆಯ ಧುರಂದರ್ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸಾವಿರ ಕೋಟಿ ಗಳಿಸಿದೆ. 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಖ್ಯಾತಿಗೂ ಪಾತ್ರವಾಗಿದೆ.
ಆದರೆ, ಗಲ್ಫ್ ರಾಷ್ಟ್ರಗಳಲ್ಲಿ ಧುರಂದರ್ ಸಿನಿಮಾಗೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಸಿನಿಮಾಕ್ಕೆ ಸುಮಾರು ₹90 ಕೋಟಿ ನಷ್ಟವಾಗಿದೆ. ಯುಎಇ, ಸೌದಿ ಅರೇಬಿಯಾ, ಕತಾರ್, ಬೆಹ್ರೇನ್, ಕುವೈತ್, ಓಮಾನ್ ಸೇರಿ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಧುರಂದರ್ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
ನಿಷೇಧದಿಂದಾಗಿ ಚಿತ್ರಕ್ಕೆ ಸುಮಾರು ₹90 ಕೋಟಿ ನಷ್ಟವಾಗಿದೆ ಎಂದು ಧುರಂಧರ್ ಚಿತ್ರದ ವಿದೇಶಿ ವಿತರಕ ಪ್ರಣಬ್ ಕಪಾಡಿಯಾ ಬಹಿರಂಗಪಡಿಸಿದ್ದಾರೆ. ಸಾಮಾನ್ಯವಾಗಿ ಗಲ್ಫ್ ಮಾರುಕಟ್ಟೆಯಲ್ಲಿ ಭಾರತೀಯ ಆಕ್ಷನ್ ಚಿತ್ರಗಳಿಗೆ ಬಹುಬೇಡಿಕೆಯಿದೆ ಎಂದೂ ಅವರು ತಿಳಿಸಿದ್ದಾರೆ.
ನಿಷೇಧವಿದ್ದರೂ ಡಿಸೆಂಬರ್‌ನಲ್ಲಿ ರಜಾದಿನಗಳಿದ್ದ ಕಾರಣದಿಂದ ಅನೇಕರು ವಿದೇಶಿ ಪ್ರವಾಸ ಕೈಗೊಂಡಿದ್ದು, ಅಲ್ಲಿ ಚಿತ್ರವನ್ನು ವೀಕ್ಷಿಸಿದ್ದಾರೆ. ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಿರುವುದಕ್ಕೆ ಹೆಚ್ಚಿನ ಜನರು ವಿದೇಶದಲ್ಲಾದರೂ ಚಿತ್ರವನ್ನು ನೋಡಲು ಸಾಧ್ಯವಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.