ADVERTISEMENT

ನಿಷೇಧವಿದ್ದರೂ ಪಾಕಿಸ್ತಾನದಲ್ಲಿ ಸಿಗುತ್ತಿದೆ ಧುರಂಧರ್‌ ಸಿನಿಮಾದ ನಕಲಿ ಪ್ರತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2026, 7:37 IST
Last Updated 13 ಫೆಬ್ರುವರಿ 2026, 7:37 IST
<div class="paragraphs"><p>ಪಾಕಿಸ್ತಾನದಲ್ಲಿ&nbsp; ಧುರಂಧರ್‌ ಸಿನಿಮಾದ ನಕಲಿ ಪ್ರತಿ</p></div>

ಪಾಕಿಸ್ತಾನದಲ್ಲಿ  ಧುರಂಧರ್‌ ಸಿನಿಮಾದ ನಕಲಿ ಪ್ರತಿ

   

ಚಿತ್ರ ಕೃಪೆ: Instagram/iamkarlrock

ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ’ಧುರಂಧರ್’ ಸಿನಿಮಾದ ಪ್ರದರ್ಶನವನ್ನು ಕೆಲವು ದೇಶಗಳಲ್ಲಿ ತಡೆ ಹಿಡಿಯಲಾಗಿತ್ತು. ಇದರ ಹೊರತಾಗಿಯೂ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ₹1.300 ಕೋಟಿ ಗಳಿಸಿದೆ.

ADVERTISEMENT

ಪಾಕಿಸ್ತಾನದಲ್ಲಿ ಧುರಂಧರ್‌ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಏರಲಾಗಿತ್ತು. ಆದರೆ ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಅಗ್ರಸ್ಥಾನ ಗಳಿಸಿತ್ತು. ಈಗ ಬೀದಿ ಬದಿ ಅಂಗಡಿಗಳಲ್ಲೂ ಧುರಂಧರ್‌ ಸಿನಿಮಾದ ನಕಲಿ ಪ್ರತಿಗಳು ಸಿಗುತ್ತಿವೆ.

16 ರೂಪಾಯಿಗೆ (ಪಾಕಿಸ್ತಾನ ರೂಪಾಯಿ) ನಕಲಿ ಪ್ರತಿಗಳು ಸಿಗುತ್ತಿವೆ ಎಂದು ನ್ಯೂಜಿಲೆಂಡ್‌ನ ಯುಟ್ಯೂಬರ್‌ ಒಬ್ಬರು ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ, ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಅಲ್ಲದೆ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೂ ಗ್ರಾಸವಾಗಿದೆ. ಪಾಕಿಸ್ತಾನದಲ್ಲಿ ಸಿನಿಮಾ ನಿಷೇಧವಾದರೂ ಸಿನಿಮಾವನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಸಿನಿಮಾವನ್ನು ಮಾರಾಟ ಮಾಡಲಾಗುತ್ತಿದೆ. ಪಾಕಿಸ್ತಾನದ ಜನರಿಗೆ ಭಾರತೀಯ ಸಿನಿಮಾ ಹಾಗೂ ಹಾಡುಗಳ ಮೇಲೆ ಅತೀವ ಒಲವಿದೆ. ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳಿಗೆ ಬೇಡಿಕೆಯೂ ಇದೆ ಎನ್ನುವುದನ್ನು ಈ ಮೂಲಕ ತಿಳಿಯಬಹುದು ಎಂದಿದ್ದಾರೆ.

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್‌’ ಸಿನಿಮಾದ ಯಶಸ್ಸಿನ ನಂತರ ಎರಡನೇ ಭಾಗವಾದ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಆರ್. ಮಾಧವನ್, ಸಂಜಯ್ ದತ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾರ್ಚ್ 19ರಂದು ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.