ADVERTISEMENT

‘ಬ್ರೊ ಡ್ಯಾಡಿ’ ರಿಮೇಕ್‌ ಚಿತ್ರದಲ್ಲಿ ತೆಲುಗು ಮೆಗಾಸ್ಟಾರ್ ಚಿರಂಜೀವಿ? 

ಐಎಎನ್ಎಸ್
Published 19 ಮಾರ್ಚ್ 2022, 10:46 IST
Last Updated 19 ಮಾರ್ಚ್ 2022, 10:46 IST
ಚಿರಂಜೀವಿ
ಚಿರಂಜೀವಿ   

ಹೈದರಾಬಾದ್: ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರು ಮಲಯಾಳಂನ ‘ಬ್ರೊ ಡ್ಯಾಡಿ’ ತೆಲುಗು ರಿಮೇಕ್‌ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಚಿರಂಜೀವಿ ಅವರು ಪ್ರಸ್ತುತ ಮಲಯಾಳಂನ ಪೊಲಿಟಿಕಲ್ ಥ್ರಿಲ್ಲರ್ ‘ಲೂಸಿಫರ್’ನ ತೆಲುಗು ರಿಮೇಕ್ ಆಗಿರುವ ‘ಗಾಡ್‌ಫಾದರ್’ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಚಿರಂಜೀವಿ ಅವರು ಮತ್ತೊಂದು ಮಲಯಾಳಂ ರಿಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ADVERTISEMENT

ಮಲಯಾಳಂ ನಟ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ಬ್ರೊ ಡ್ಯಾಡಿ’ ಚಿತ್ರದ ತೆಲುಗು ರಿಮೇಕ್‌ನಲ್ಲಿ ಚಿರಂಜೀವಿ ನಟಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

‘ಬ್ರೊ ಡ್ಯಾಡಿ’ ಕಾಮಿಡಿ ಎಂಟರ್‌ಟೈನರ್ ಆಗಿದ್ದು, ಚಿತ್ರಕ್ಕೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿರಂಜೀವಿ ನಟನೆಯ ‘ಆಚಾರ್ಯ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಂದೆಡೆ ‘ಭೋಲಾ ಶಂಕರ್’, ‘ಗಾಡ್‌ಫಾದರ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವುದಾಗಿ ವರದಿಯಾಗಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.