ADVERTISEMENT

ಪರಸ್ಪರ ಎದುರಾಗದ ನಾಗಚೈತನ್ಯ, ಸಮಂತಾ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 11:05 IST
Last Updated 27 ಡಿಸೆಂಬರ್ 2021, 11:05 IST
ಸಮಂತಾ, ನಾಗಚೈತನ್ಯ
ಸಮಂತಾ, ನಾಗಚೈತನ್ಯ   

ಹೈದರಾಬಾದ್‌: ತೆಲುಗಿನ ಸ್ಟಾರ್‌ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಛೇದನ ಪಡೆದು ಕೆಲವು ದಿನಗಳ ಬಳಿಕ ಪರಸ್ಪರ ಎದುರುಗೊಳ್ಳುವ ಅವಕಾಶ ದೊರಕಿತ್ತು. ಆದರೆ ಅವರಿಬ್ಬರುಅದರಿಂದ ದೂರ ಸರಿದಿದ್ದಾರೆ.

ಹೌದು. ಸಿನಿಮಾ ಕೆಲಸದ ನಿಮಿತ್ತ ನಾಗಚೈತನ್ಯ ಹಾಗೂ ಸಮಂತಾ ರಾಮನಾಯ್ಡು ಸ್ಟುಡಿಯೊಗೆ ಬಂದಿದ್ದರು. ಅಲ್ಲಿ ಅವರಿಗೆ ಪರಸ್ಪರ ಭೇಟಿಯಾಗುವ ಅವಕಾಶ ಇತ್ತು. ಆದರೆ ಅವರು ಅಂಗರಕ್ಷಕರ ನೆರವು ಪಡೆದು ಒಬ್ಬರನೊಬ್ಬರು ನೋಡುವುದರಿಂದ ದೂರ ಸರಿದರು ಎನ್ನಲಾಗಿದೆ.

ಸಮಂತಾ ಇರುವ ಕಡೆ ತೆರೆಳದೆ ನಾಗಚೈತನ್ಯ ಬೇರೆ ಬಾಗಿಲಿನಿಂದ ಹೊರನೆಡೆದರು. ನಾಗಚೈತನ್ಯ ಹೋದ ಬಳಿಕ ಕೆಲವೇ ನಿಮಿಷಗಳಲ್ಲಿ ಸಮಂತಾ ಸಹ ತೆರಳಿದರು ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ.

ADVERTISEMENT

ಸದ್ಯ ನಾಗಚೈತನ್ಯ ಬಂಗರ್ರಾಜು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಕೂಡ ತೆಲುಗು, ತಮಿಳು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.