
ಇಳಯರಾಜ ಮತ್ತು ನಿರ್ದೇಶಕ ಅರುಣ್ ಮಾಥೇಶ್ವರನ್
ಚಿತ್ರ ಕೃಪೆ: Instagram/@thatswatitis
ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ ಅವರ ಜೀವನ ಆಧಾರಿತ ಸಿನಿಮಾವನ್ನು ಅರುಣ್ ಮಾಥೇಶ್ವರನ್ ನಿರ್ದೇಶನ ಮಾಡುತ್ತಿಲ್ಲ, ನಿರ್ಮಾಪಕರು ಹೊಸ ನಿರ್ದೇಶಕರೊಂದಿಗೆ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಆದರೆ ಈ ಸುದ್ದಿ ಸುಳ್ಳು ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ. ನಿರ್ದೇಶಕ ಅರುಣ್ ಮಾಥೇಶ್ವರನ್ ಈ ಬಗ್ಗೆ ಮಾಹಿತಿ ನೀಡದ್ದು, ಇಳಯರಾಜ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾವನ್ನು ನಿರ್ದೇಶಿಸಲು ನಾವು ಬದ್ಧರಾಗಿದ್ದೇವೆ. ಲೋಕೇಶ್ ಕನಕರಾಜ್ ನಟನೆಯ ಡಿಸಿ (ದೇವದಾಸ್, ಚಂದ್ರ) ಸಿನಿಮಾದ ಚಿತ್ರೀಕರಣ ಪೂರ್ಣವಾದ ಬಳಿಕ ಇಳಯರಾಜ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಕುರಿತು ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲಿಯೇ ಹಂಚಿಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.
ಅರುಣ್ ಮಾಥೇಶ್ವರನ್ ಅವರು ಇಳಯರಾಜ ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಅವರು ಹೇಳಿದ ಕಥೆ, ವಾಸ್ತವತೆ ಹಾಗೂ ಘಟನೆಗಳನ್ನು ಆಧರಿಸಿ ಚಿತ್ರಕಥೆ ರಚಿಸುವ ಗುರಿಯನ್ನು ಹೊಂದಿದ್ದಾರೆ.
ಚಿತ್ರದಲ್ಲಿ ಇಳಯರಾಜ ಪಾತ್ರದಲ್ಲಿ ನಟ ಧನುಷ್ ನಟಿಸಲಿದ್ದಾರೆ. ಶ್ರೀರಾಮ್ ಭಕ್ತಿಸರನ್, ಸಿ.ಕೆ ಪದ್ಮ ಕುಮಾರ್, ವರುಣ್ ಮಾಥುರ್, ಇಳಂಪರಿತಿ ಗಜೇಂದ್ರನ್ ಮತ್ತು ಸೌರಭ್ ಮಿಶ್ರಾ ಅವರು ಬಂಡವಾಳ ಹೂಡಿದ್ದಾರೆ.
ಈ ಚಿತ್ರ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.