ADVERTISEMENT

ಮೈ ಬೆಲ್ಲಾ… ಪ್ರೀತಿಯ ನಾಯಿಮರಿ ಫೋಟೊ ಹಂಚಿಕೊಂಡ ದಿಶಾ ಪಟಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2021, 6:39 IST
Last Updated 10 ಆಗಸ್ಟ್ 2021, 6:39 IST
ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಯ ನಾಯಿಮರಿ ಫೋಟೊ
ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಯ ನಾಯಿಮರಿ ಫೋಟೊ   

ಬೆಂಗಳೂರು: ಬೀಚ್ ಮತ್ತು ಬಿಕಿನಿ ಧರಿಸಿದ ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ ಬಾಲಿವುಡ್‌ನಲ್ಲಿ ಸದಾ ಸುದ್ದಿಯಲ್ಲಿರುವ ನಟಿ ದಿಶಾ ಪಟಾನಿ ಈ ಬಾರಿ ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಯ ನಾಯಿಮರಿ ಫೋಟೊ ಹಂಚಿಕೊಂಡಿದ್ದಾರೆ.

ದಿಶಾ ಪಟಾನಿ ಅವರ ಬಳಿ ಬೆಲ್ಲಾ ಹೆಸರಿನ ನಾಯಿ ಇದೆ. ಸಮಯ ಸಿಕ್ಕಾಗಲೆಲ್ಲಾ ಅವರು ಪ್ರೀತಿಯ ನಾಯಿ ಜತೆ ಆಟವಾಡುತ್ತಾ ಇರುತ್ತಾರೆ.

ಬೆಲ್ಲಾ ಹೆಸರಿನ ನಾಯಿಯ ಫೋಟೊವನ್ನು ಕೂಡ ದಿಶಾ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ADVERTISEMENT

ಉಳಿದಂತೆ, ದಿಶಾ ನಾಯಿ, ಬೆಕ್ಕಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದು, ಶೂಟಿಂಗ್ ಹೋದಾಗ ಮತ್ತು ಗೆಳೆಯರ ಮನೆಗೆ ಹೋದ ಸಂದರ್ಭದಲ್ಲೂ ಅಲ್ಲಿರುವ ಸಾಕುಪ್ರಾಣಿಗಳ ಜತೆ ಸಮಯ ಕಳೆಯುತ್ತಾರೆ.

ಬೆಲ್ಲಾವನ್ನು ವಾಕಿಂಗ್ ಕರೆದುಕೊಂಡು ಹೋಗುವುದು ಮತ್ತು ಅದರ ಪಾಲನೆ ಮಾಡುವುದು ದಿಶಾ ಅವರ ನೆಚ್ಚಿನ ಕೆಲಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.