ADVERTISEMENT

ಅಮೆರಿಕದ ಹೊರಗೆ ತಯಾರಾಗುವ ಸಿನಿಮಾಗಳಿಗೆ ಶೇ. 100 ಸುಂಕ ವಿಧಿಸಿದ ಟ್ರಂಪ್!

ಪಿಟಿಐ
Published 29 ಸೆಪ್ಟೆಂಬರ್ 2025, 16:14 IST
Last Updated 29 ಸೆಪ್ಟೆಂಬರ್ 2025, 16:14 IST
ಡೊನಾಲ್ಡ್‌ ಟ್ರಂಪ್‌ 
ಡೊನಾಲ್ಡ್‌ ಟ್ರಂಪ್‌    

ನ್ಯೂಯಾರ್ಕ್‌: ಅಮೆರಿಕದ ಹೊರಗೆ ತಯಾರಾಗುವ ಎಲ್ಲಾ ಚಿತ್ರಗಳ ಮೇಲೆ ಶೇ100ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಘೋಷಿಸಿದ್ದಾರೆ.

ಟ್ರಂಪ್‌ ಅವರ ಈ ನಡೆಯು ಭಾರತೀಯ ಚಿತ್ರರಂಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

‘ದೀರ್ಘಕಾಲದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ, ಅಮೆರಿಕದ ಹೊರಗೆ ತಯಾರಾಗುವ ಯಾವುದೇ ಅಥವಾ ಎಲ್ಲ ಚಿತ್ರಗಳ ಮೇಲೆ ನಾನು ಶೇ 100ರಷ್ಟು ಸುಂಕ ವಿಧಿಸುತ್ತಿದ್ದೇನೆ’ ಎಂದು ಅವರು ತಮ್ಮ ಒಡೆತನದ ಸಾಮಾಜಿಕ ಜಾಲತಾಣ ‘ಟ್ರುತ್‌ ಸೋಷಿಯಲ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಭಾರತೀಯ ಚಿತ್ರರಂಗವು ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರಗಳು ಅಮೆರಿಕದಲ್ಲಿರುವ ಭಾರತೀಯರಲ್ಲಿ ಜನಪ್ರಿಯವಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.