ADVERTISEMENT

ಅಕ್ಟೋಬರ್‌ 17ರಿಂದ ಜೀ 5ನಲ್ಲಿ ‘ಏಳುಮಲೆ’

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 23:30 IST
Last Updated 7 ಅಕ್ಟೋಬರ್ 2025, 23:30 IST
ರಾಣಾ, ಪ್ರಿಯಾಂಕ 
ರಾಣಾ, ಪ್ರಿಯಾಂಕ    

‘ಕಾಟೇರ’ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್‌ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ‘ಏಳುಮಲೆ’ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ. ಕಳೆದ ಸೆ.5ರಂದು ತೆರೆಕಂಡಿದ್ದ ಈ ಸಿನಿಮಾ ಅ.17ರಿಂದ ಜೀ 5ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. 

ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿದ ಸಂಭ್ರಮವನ್ನು ಚಿತ್ರತಂಡ ಆಚರಿಸಿತ್ತು. ರೊಮ್ಯಾಂಟಿಕ್‌ ಥ್ರಿಲ್ಲರ್‌ ಜಾನರ್‌ನಲ್ಲಿರುವ ಈ ಸಿನಿಮಾದಲ್ಲಿ ‘ಏಕ್‌ ಲವ್‌ ಯಾ’ ಖ್ಯಾತಿಯ ನಟ ರಾಣಾ ನಾಯಕನಾಗಿ ಹಾಗೂ ‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಆಚಾರ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಜಗಪತಿ ಬಾಬು, ಕಿಶೋರ್ ಮತ್ತು ಟಿ.ಎಸ್. ನಾಗಾಭರಣ ತಾರಾಬಳಗದಲ್ಲಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿ ನಡೆಯುವ ಪ್ರೇಮಕಥೆ ಚಿತ್ರದಲ್ಲಿದ್ದು, ಮೈಸೂರಿನ ಅನಾಥ ಹುಡುಗ ‘ಹರೀಶ’ನಾಗಿ ಪಾತ್ರದಲ್ಲಿ ರಾಣಾ ನಟಿಸಿದ್ದಾರೆ. ಮೈಸೂರಿಗೆ ಓದಲು ಬಂದ ತಮಿಳುನಾಡಿನ ಶ್ರೀಮಂತ ಕುಟುಂಬದ ಹುಡುಗಿ ‘ರೇವತಿ’ಯಾಗಿ ಪ್ರಿಯಾಂಕಾ ಅಭಿನಯಿಸಿದ್ದಾರೆ. ಇವರಿಬ್ಬರ ಪ್ರೇಮಕಥೆಯನ್ನು ಥ್ರಿಲ್ಲರ್‌ ಅಂಶಗಳನ್ನೊಳಗೂಡಿಸಿ ಪುನೀತ್‌ ಹೆಣೆದಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.