ADVERTISEMENT

ಜಾನೂ ನೋಟಕ್ಕೆ ಪ್ರೇಕ್ಷಕ ಫಿದಾ!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 19:46 IST
Last Updated 19 ಮಾರ್ಚ್ 2019, 19:46 IST
ಜಾಹ್ನವಿ ಕಪೂರ್‌
ಜಾಹ್ನವಿ ಕಪೂರ್‌   

ಜಾಹ್ನವಿ ಕಪೂರ್‌ ಧರಿಸುವ ಉಡುಗೆ ತೊಡುಗೆಗಳು ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಾಗಿರುತ್ತವೆ. ಚಿತ್ರರಂಗಕ್ಕೆ ಸಂಬಂಧಿಸಿದ ಸಮಾರಂಭಗಳಿಗೆ ಜಾನೂ ಸ್ವಲ್ಪ ಹೆಚ್ಚೇ ಉಮೇದಿನಿಂದ ಉಡುಗೆ ತೊಡುಗೆ ಆರಿಸುತ್ತಾರೆ.

ಮುಂಬೈನಲ್ಲಿ ಮೊನ್ನೆ ನಡೆದ ‘ಹಲೋ ಹಾಲ್‌ ಆಫ್‌ ಫೇಮ್‌’ ಎಂಬ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನೂ ವೇದಿಕೆಯನ್ನು ಆವರಿಸಿಕೊಂಡರು. ಧರಿಸಿದ್ದ ಉಡು‍ಪು ಜಾನೂಗೆ ಇನ್ನಷ್ಟು ಹಾಟ್‌ ಲುಕ್‌ ನೀಡುವಂತಿತ್ತು. ಉದ್ದನೆಯ ಗೌನ್‌ನ ವಿನ್ಯಾಸ ಮತ್ತು ತೊಡೆವರೆಗಿನ ಕಟ್‌ನಿಂದಾಗಿ ಗ್ಲಾಮರಸ್‌ ಆಗಿತ್ತು. ಬಾಲಿವುಡ್‌ನ ಹೊಸ ಪ್ರತಿಭೆಗಳಿಗೆ ಮೀಸಲಾದ ಪ್ರಶಸ್ತಿಯನ್ನು ‘ಧಡಕ್‌’ ಸುಂದರಿ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT