ADVERTISEMENT

ನಟ ಧನುಷ್–ಐಶ್ವರ್ಯ ರಜನಿಕಾಂತ್‌ಗೆ ವಿಚ್ಛೇದನ ಮಂಜೂರು ಮಾಡಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 15:49 IST
Last Updated 27 ನವೆಂಬರ್ 2024, 15:49 IST
ಸೂಪರ್‌ಸ್ಟಾರ್ ರಜನಿಕಾಂತ್, ಪುತ್ರಿ ಐಶ್ವರ್ಯ ಮತ್ತು ನಟ ಧನುಷ್
ಸೂಪರ್‌ಸ್ಟಾರ್ ರಜನಿಕಾಂತ್, ಪುತ್ರಿ ಐಶ್ವರ್ಯ ಮತ್ತು ನಟ ಧನುಷ್    

ಚೆನ್ನೈ: ತಮಿಳು ನಟ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ಅವರಿಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ.

ಧನುಷ್ ಅವರು ನಿರ್ದೇಶಕ ಕಸ್ತೂರಿರಾಜಾ ಅವರ ಮಗನಾಗಿದ್ದು, ಐಶ್ವರ್ಯ ಅವರು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ. 2004ರ ನವೆಂಬರ್ 18ರಂದು ವಿವಾಹವಾಗಿದ್ದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ 2022ರ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು. ಬಳಿಕ, ಕಾನೂನಾತ್ಮಕವಾಗಿ ಬೇರೆಯಾಗಲು, ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ADVERTISEMENT

ಕಳೆದ ನವೆಂಬರ್ 21ರಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಸುಭಾದೇವಿ ಮುಂದೆ ಹಾಜರಾಗಿದ್ದ ದಂಪತಿ ನಾವಿಬ್ಬರು ಒಟ್ಟಿಗೆ ಬದುಕುವುದು ಸಾಧ್ಯವಿಲ್ಲ, ವಿಚ್ಛೇದನ ನಿರ್ಧಾರ ಅಚಲವಾಗಿದೆ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ.

ಇಬ್ಬರೂ ಚೆನ್ನೈನ ಪೋಯಸ್ ಗಾರ್ಡನ್ ಪ್ರದೇಶದ ಸಮೀಪದ ಮನೆಗಳಲ್ಲೇ ವಾಸವಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.