ADVERTISEMENT

ಸಿನಿಮಾ ಆಸಕ್ತ ವಿದ್ಯಾರ್ಥಿಗಳಿಗೆ ಚಿತ್ರೋತ್ಸವಗಳು ತುಂಬಾ ಮುಖ್ಯ: ನವಾಜುದ್ದೀನ್

ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಮಾತು

ಪಿಟಿಐ
Published 25 ನವೆಂಬರ್ 2023, 10:25 IST
Last Updated 25 ನವೆಂಬರ್ 2023, 10:25 IST
<div class="paragraphs"><p>ನವಾಜುದ್ದೀನ್ ಸಿದ್ಧಿಕಿ</p></div>

ನವಾಜುದ್ದೀನ್ ಸಿದ್ಧಿಕಿ

   

ಪಣಜಿ: ಚಿತ್ರೋತ್ಸವಗಳು ಸಿನಿಮಾಗಳನ್ನು ಅರ್ಥ ಮಾಡಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಹೇಳಿದ್ದಾರೆ.

ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಶನಿವಾರ ಅವರು ಮಾತನಾಡಿದರು.

ADVERTISEMENT

ಈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಮ್ಮ ದೇಶಕ್ಕೆ ತುಂಬಾ ಮಹತ್ವದ್ದು. ಕಥೆ ಹೇಳಲು ಬಯಸುವವರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ, ಸಿನಿಮಾ ಆಸಕ್ತರಿಗೆ ಚಿತ್ರೋತ್ಸವಗಳು ಹೊಸ ದಾರಿ ತೋರಿಸುತ್ತವೆ ಎಂದು ಹೇಳಿದರು.

ಸಿನಿಮಾ ಜಗತ್ತಿನ ಬಗ್ಗೆ ಅತ್ಯುತ್ತಮ ಎನ್ನುವಂತಹ ಸೆಮಿನಾರ್‌ಗಳು ಇಲ್ಲಿ ಏರ್ಪಡುವುದು ಖುಷಿಯ ಸಂಗತಿ. ಕಿರುಚಿತ್ರಗಳನ್ನು ನಿರ್ದೇಶಿಸುವವರಿಗೂ ಇಲ್ಲಿ ಹೊಸ ಬೆಳಕು ತೋರುತ್ತದೆ ಎಂದು ಅಭಿಪ್ರಾಯಪಟ್ಟರು.

ನಾನು ವಿದ್ಯಾರ್ಥಿಯಾಗಿದ್ದಾಗ ಇಷ್ಟೊಂದು ಚಿತ್ರೋತ್ಸವಗಳು ನಡೆಯುತ್ತಿರಲಿಲ್ಲ. ಸದ್ಯ ಚಿತ್ರೊಧ್ಯಮಗಳು ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ ಎಂದರು.

ಪುಸ್ತಕಗಳಲ್ಲಿರುವ ಹಾಗೂ ಸಾಹಿತ್ಯಗಳಲ್ಲಿರುವ ಸರಕು ದೊಡ್ಡ ಪರದೆಯ ಮೇಲೆ ಬಂದರೆ ಚೆನ್ನ ಎಂದು ಇದೇ ವೇಳೆ ಸಿದ್ಧಿಕಿ ನುಡಿದರು.

ನವೆಂಬರ್ 28ರವರೆಗೆ 54 ನೇ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.