ADVERTISEMENT

ಕೊನೆಗೂ ಸೆಟ್ಟೇರಲು ಸಜ್ಜಾದ ಸಿಂಬು ನಟನೆಯ ‘ಅರಸನ್’ ಸಿನಿಮಾ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 0:13 IST
Last Updated 3 ಡಿಸೆಂಬರ್ 2025, 0:13 IST
ಸಿಂಬು
ಸಿಂಬು   

ತಮಿಳು ನಿರ್ದೇಶಕ ವೆಟ್ರಿಮಾರನ್ ಅವರ ಮುಂದಿನ ಸಿನಿಮಾಗಳು ನಿಂತು ಹೋಗುತ್ತಿವೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹಬ್ಬಿತ್ತು. ಇದೀಗ ಅವರ ಪ್ರಮುಖ ಸಿನಿಮಾವೊಂದರ ಅಪ್‌ಡೇಟ್‌ ಸಿಕ್ಕಿದ್ದು, ಸಿಂಬು ಜೊತೆಗಿನ ‘ಅರಸನ್‌’ ಚಿತ್ರ ಡಿ.8ರಿಂದ ಸೆಟ್ಟೇರಲಿದೆ.

ಸೂರ್ಯ ಜೊತೆಗಿನ ‘ವಡಿವಾಸಲ್’ ಹಾಗೂ ಧನುಷ್ ಜೊತೆಗಿನ ‘ವಡ ಚೆನ್ನೈ 2’ ಚಿತ್ರಗಳನ್ನು ವೆಟ್ರಿಮಾರನ್‌ ಘೋಷಿಸಿದ್ದರು. ಆದರೆ ನಿರ್ಮಾಪಕ ಹಾಗೂ ನಿರ್ದೇಶಕರ ನಡುವಿನ ಗೊಂದಲಗಳಿಂದ ವೆಟ್ರಿಮಾರನ್ ನಿರ್ದೇಶನದ ಮುಂದಿನ ಸಿನಿಮಾಗಳು ಈತನಕ ಸೆಟ್ಟೇರಿರಲಿಲ್ಲ. ನಿರ್ಮಾಪಕರ ಷರತ್ತುಗಳೊಂದಿಗೆ ಸಿಂಬು ನಟನೆಯ ‘ಅರಸನ್‌’ ಸೆಟ್ಟೇರುತ್ತಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. 

ಇದೊಂದು ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಇದರ ಟೀಸರ್‌ ಕೆಲ ದಿನಗಳ ಹಿಂದೆ ಬಿಡುಗಡೆಗೊಂಡಿತ್ತು. ಕೊಲೆ ಆಧಾರಿತ ಕಥೆಯಲ್ಲಿ ನಾಯಕ ಕತ್ತಿ ಹಿಡಿದು ಕೊಲ್ಲಲು ಸಿದ್ಧನಾದ ದೃಶ್ಯವನ್ನು ಟೀಸರ್‌ನಲ್ಲಿ ತೋರಿಸಿ, ತಮ್ಮ ಹಿಂದಿನ ಸಿನಿಮಾಗಳಂತೆ ಇದು ಕೂಡ ಕಲ್ಟ್‌ ಮಾಸ್‌ ಆ್ಯಕ್ಷನ್‌ ಸಿನಿಮಾ ಎಂಬ ಸುಳಿವನ್ನು ವೆಟ್ರಿಮಾರನ್ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.