ADVERTISEMENT

ಈ ವಾರ ತೆರೆ ಕಾಣುತ್ತಿರುವ ಸಿನಿಮಾಗಳು ಇವು...

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 19:30 IST
Last Updated 5 ಮಾರ್ಚ್ 2020, 19:30 IST
‘ಒಂದು ಶಿಕಾರಿಯ ಕಥೆ’ ಚಿತ್ರದಲ್ಲಿ ಪ್ರಮೋದ್‌ ಶೆಟ್ಟಿ
‘ಒಂದು ಶಿಕಾರಿಯ ಕಥೆ’ ಚಿತ್ರದಲ್ಲಿ ಪ್ರಮೋದ್‌ ಶೆಟ್ಟಿ   

ದ್ರೋಣ

ಡಾಲ್ಫಿನ್‌ ಮೀಡಿಯಾ ಹೌಸ್‌ ಲಾಂಛನದಡಿ ಮಹದೇವ್‌ ಬಿ., ಸಂಗಮೇಶ ಬಿ., ಶೇಶು ಚಕ್ರವರ್ತಿ ನಿರ್ಮಿಸಿರುವ ‘ದ್ರೋಣ’ ಚಿತ್ರ ತೆರೆ ಕಾಣುತ್ತಿದೆ. ಪ್ರಮೋದ್‌ ಚಕ್ರವರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಛಾಯಾಗ್ರಹಣ ಜೆ.ಎಸ್. ವಾಲಿ. ರಾಮ್‍ಕ್ರಿಶ್ ಸಂಗೀತ ನೀಡಿದ್ದಾರೆ. ಮನೋಹರ್, ನಾಗೇಂದ್ರಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಮದುವೆ ಮಾಡ್ರಿ ಸರಿ ಹೋಗ್ತಾನೆ

ADVERTISEMENT

ಶಿವರಾಜ್ ಲಕ್ಷ್ಮಣ್ ರಾವ್ ದೇಸಾಯಿ ನಿರ್ಮಾಣದ ‘ಮದುವೆ ಮಾಡ್ರಿ ಸರಿಹೋಗ್ತಾನೆ’ ಚಿತ್ರಕ್ಕೆ ಗೋಪಿ ಕೆರೂರ್ ಕಥೆ, ಚಿತ್ರಕಥೆ,ನಿರ್ದೇಶನವಿದೆ.

ಓ ಪುಷ್ಪಾ ಐ ಹೇಟ್ ಟಿಯರ್ಸ್

ನಟ ಜಯರಾಂ ಕಾರ್ತಿಕ್ ನಾಯಕರಾಗಿರುವ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣವಾಗಿರುವ ‘ಓ ಪುಷ್ಪಾ ಐ ಹೇಟ್ ಟಿಯರ್ಸ್’ ಚಿತ್ರ ತೆರೆ ಕಾಣುತ್ತಿದೆ. ಕಾಮಿಡಿ, ಥ್ರಿಲ್ಲರ್ ಸಿನಿಮಾ ಇದು. ದಿನಕರ್ ಕಪೂರ್ ನಿರ್ದೇಶನದ ಈ ಚಿತ್ರಕ್ಕೆ ಅಮೂಲ್ಯ ದಾಸ್‌ ಬಂಡವಾಳ ಹೂಡಿದ್ದಾರೆ.ಅರವಿಂದ್ ಸಿಂಗ್‌ ಪೂವಾರ್‌ ಅವರ ಛಾಯಾಗ್ರಹಣವಿದೆ. ರಾಂಜಿ ಗುಲಾಟಿ ಸಂಗೀತ ನೀಡಿದ್ದಾರೆ.

ಒಂದು ಶಿಕಾರಿಯ ಕಥೆ

ಶೆಟ್ಟಿಶ್‌ ಫಿಲಂ ಫ್ಯಾಕ್ಟರಿ ಲಾಂಛನದಡಿ ರಾಜೀವ್ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ನಿರ್ಮಿಸಿರುವ ‘ಒಂದು ಶಿಕಾರಿಯ ಕಥೆ’ ಸಿನಿಮಾ ಬಿಡುಗಡೆಯಾಗುತ್ತಿದೆ. ಸಚಿನ್ ಶೆಟ್ಟಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸೇನ್‌ ಗೊಂಸವೆಸ್ಸ್‌ ಮತ್ತು ಸನತ್ ಬಾಲ್ಕುರ್ ಸಂಗೀತ ನೀಡಿದ್ದಾರೆ. ಯೊಗೇಶ್ ಗೌಡ ಅವರ ಛಾಯಾಗ್ರಹಣವಿದೆ.

ಮೈ ನೇಮ್ ಈಸ್ ರಾಜಾ

ಅಮೋಘ್ ಎಂಟರ್‌ಪ್ರೈಸಸ್ ಲಾಂಛನದಡಿ ರಾಜ್ ಸೂರ್ಯನ್, ಪ್ರಭಾಕರ್ ರೆಡ್ಡಿ, ಕಿರಣ್ ರೆಡ್ಡಿ ನಿರ್ಮಾಣದ ‘ಮೈ ನೇಮ್ ಈಸ್ ರಾಜಾ’ ಸಿನಿಮಾ ತೆರೆ ಕಾಣುತ್ತಿದೆ.ಅಶ್ವಿನ್‌ ಕೃಷ್ಣ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಾಜ್‌ ಸೂರ್ಯನ್‌ ಇದರ ನಾಯಕ. ಆಕರ್ಷಿಕಾ ಮತ್ತು ನಸ್ರೀನ್ ನಾಯಕಿಯರಾಗಿದ್ದಾರೆ. ಪ್ರಭುಸೂರ್ಯ, ನೇಪಾಳದ ಆಯುಶ್ರೀ, ಇರಾನ್ ದೇಶದ ಸೂಪರ್ ಮಾಡೆಲ್ ಏವಾ ಸಫಾಯಿ ನಟಿಸಿರುವ ಈ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ನಿರ್ಮಾಣವಾಗಿದೆ. ಎಲ್ವಿನ್ ಜೊಶ್ವಾ ಸಂಗೀತ ನೀಡಿದ್ದಾರೆ. ವಿ. ನಾಗೇಂದ್ರಪ್ರಸಾದ್, ಕವಿರಾಜ್ ಮತ್ತು ಅನಿಲ್ (ದಿಲ್ವಾಲ) ಸಾಹಿತ್ಯ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.