ADVERTISEMENT

Short Film Poster | ‘ಫಸ್ಟ್ ಸ್ಯಾಲರಿ’ ಪೋಸ್ಟರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
ಹರಿಣಿ ಶ್ರೀಕಾಂತ್‌, ಪವನ್ ವೆಂಕಟೇಶ್
ಹರಿಣಿ ಶ್ರೀಕಾಂತ್‌, ಪವನ್ ವೆಂಕಟೇಶ್   

ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಸುಧೀಂದ್ರ ವೆಂಕಟೇಶ್‌ ಇದೀಗ ನಿರ್ಮಾಪಕರಾಗಿದ್ದಾರೆ. ತಮ್ಮ ಪುತ್ರ ಪವನ್‌ ವೆಂಕಟೇಶ್‌ ನಿರ್ದೇಶನದ ‘ಫಸ್ಟ್‌ ಸ್ಯಾಲರಿ’ ಎಂಬ ಕಿರುಚಿತ್ರಕ್ಕೆ ಸುಧೀಂದ್ರ ಅವರು ಬಂಡವಾಳ ಹೂಡಿದ್ದಾರೆ. 

ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸ್ಥಾಪಕರಾದ ಡಿ.ವಿ ಸುಧೀಂದ್ರ ಅವರು ‘ಒಲವಿನ ಉಡುಗೊರೆ’, ‘ಗಣೇಶನ ಮದುವೆ, ‘ಗುಂಡನ ಮದುವೆ’, ‘ಪಟ್ಟಣಕ್ಕೆ ಬಂದ ಪುಟ್ಟ’, ‘ನಗು ನಗುತಾ ನಲಿ’ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ‘ಫಸ್ಟ್‌ ಸ್ಯಾಲರಿ’ಗೆ ಕನಸುಗಳ ಹಾದಿ ಎನ್ನುವ ಅಡಿಬರಹವಿದ್ದು, ದೀಪಾವಳಿ ಸಂದರ್ಭದಲ್ಲಿ ಕಿರುಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ.

ಈಗಾಗಲೇ ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಅನುಭವ ಪವನ್‌ಗಿದೆ. ಈ ಕಿರುಚಿತ್ರದಲ್ಲಿ ಹರಿಣಿ ಶ್ರೀಕಾಂತ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಜಯ್ ಶಿವಕುಮಾರ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ ಮತ್ತು ರಕ್ಷಿತ್ ತಾರಾಬಳಗದಲ್ಲಿದ್ದಾರೆ. ಶ್ರೀರಾಘವೇಂದ್ರ ಚಿತ್ರವಾಣಿ ಯೂಟ್ಯೂಬ್‍ನಲ್ಲೇ ಈ ಕಿರುಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. 

ADVERTISEMENT

‘ಇದು ತಾಯಿ ಜೊತೆಗಿನ ಭಾವಾನತ್ಮಕ ಸಂಬಂಧದ ಕುರಿತ ಕಿರುಚಿತ್ರ. ಐದು ದಿನ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಒಂದು ತಿಂಗಳು ಹಿಡಿದಿದೆ. ಕಿರುಚಿತ್ರದಲ್ಲಿ ಒಂದು ಹಾಡಿದ್ದು, ಡಿಐ ಸೇರಿದಂತೆ ಒಟ್ಟಾರೆ ಕಿರುಚಿತ್ರದ ತಯಾರಿಕೆಗೆ ಮೂರು ತಿಂಗಳು ಹಿಡಿದಿದೆ. ಕಿರುಚಿತ್ರವು 24 ನಿಮಿಷದ ಅವಧಿಯದ್ದಾಗಿದೆ’ ಎಂದಿದ್ದಾರೆ ಪವನ್‌. 

ವಿಜಯ್ ಶಿವಕುಮಾರ್ ರಚನೆ, ರಿಚರ್ಡ್ ಡ್ಯಾನಿಯಲ್ ಛಾಯಾಚಿತ್ರಗ್ರಹಣದ ಜೊತೆಗೆ ಸಂಕಲನ ಮಾಡಿದ್ದು ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.