ADVERTISEMENT

ಫಾರ್‌ ರಿಜಿಸ್ಟ್ರೇಷನ್‌: 3ನೇ ಹಾಡು 'ಯಾಕಾಗಿ ಕರಗಿತು ಸಂತೋಷ...'

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 9:07 IST
Last Updated 4 ಆಗಸ್ಟ್ 2021, 9:07 IST
‘ಫಾರ್‌ ರಿಜಿಸ್ಟ್ರೇಷನ್‌’ನಲ್ಲಿ ಯಾಕಾಗಿ ಕರಗಿತು ಸಂತೋಷ... ಹಾಡಿನ ರೆಕಾರ್ಡಿಂಗ್‌ ವೇಳೆ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಅವರನ್ನು ಗೌರವಿಸಲಾಯಿತು. ಚಿತ್ರದ ನಿರ್ದೇಶಕ ನವೀನ್‌ ದ್ವಾರಕಾನಾಥ್‌ ಇದ್ದಾರೆ
‘ಫಾರ್‌ ರಿಜಿಸ್ಟ್ರೇಷನ್‌’ನಲ್ಲಿ ಯಾಕಾಗಿ ಕರಗಿತು ಸಂತೋಷ... ಹಾಡಿನ ರೆಕಾರ್ಡಿಂಗ್‌ ವೇಳೆ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಅವರನ್ನು ಗೌರವಿಸಲಾಯಿತು. ಚಿತ್ರದ ನಿರ್ದೇಶಕ ನವೀನ್‌ ದ್ವಾರಕಾನಾಥ್‌ ಇದ್ದಾರೆ   

ಫಾರ್‌ ರಿಜಿಸ್ಟ್ರೇಷನ್‌ ಚಿತ್ರದ ಮೂರನೇ ಹಾಡಿನ ರೆಕಾರ್ಡಿಂಗ್‌ ಇತ್ತೀಚೆಗೆ ಮುಗಿದಿದೆ.ನಿಶ್ಚಲ್ ಫಿಲಮ್ಸ್ ಬ್ಯಾನರ್ ಅಡಿ ನವೀನ್ ರಾವ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಹಂತದ ಶೂಟಿಂಗ್‌ ಮುಕ್ತಾಯವಾಗಿದೆ. ಹಾಡುಗಳ ರೆಕಾರ್ಡಿಂಗ್‌ ಭರದಿಂದ ಸಾಗಿದೆ. ಶೀಘ್ರವೇ ಮುಂದಿನ ಹಂತದ ಶೂಟಿಂಗ್‌ಗೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಹರೀಶ್ ಆರ್.ಕೆ. ಸಂಗೀತ ನಿರ್ದೇಶನದ ‘ಯಾಕಾಗಿ ಕರಗಿತು ಸಂತೋಷ’ ಈ ಹಾಡಿಗೆಸಿದ್ಧಾರ್ಥ ಬೆಳ್ಮಣ್ಣು ಧ್ವನಿಯಾಗಿದ್ದಾರೆ.ನಾಗಾರ್ಜುನ ಶರ್ಮಾ ಅವರ ಸಾಹಿತ್ಯವಿದೆ.

ನವೀನ್ ದ್ವಾರಕನಾಥ್ ಚಿತ್ರದ ನಿರ್ದೇಶಕರು, ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ಅವರು ಪ್ರಧಾನ ಭೂಮಿಕೆಯಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.