ADVERTISEMENT

‘ಗೆಹರಾಯಿಯಾ’ ಟೀಸರ್‌: ಕಿಸ್ಸಿಂಗ್‌ ದೃಶ್ಯದಲ್ಲಿ ಕಂಡ ದೀಪಿಕಾ ಪಡುಕೋಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 4:32 IST
Last Updated 21 ಡಿಸೆಂಬರ್ 2021, 4:32 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಕನ್ನಡತಿ ದೀಪಿಕಾ ಪಡುಕೋಣೆ ಅಭಿನಯಿಸಿರುವ ‘ಗೆಹರಾಯಿಯಾ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ’ದೀಪಿಕಾ ಅವರ ಕಿಸ್ಸಿಂಗ್‌ ದೃಶ್ಯ’ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಗಲ್ಲಿ ಬಾಯ್​’ ಖ್ಯಾತಿಯ ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟೀಸರ್‌ನಲ್ಲಿ ಸಿದ್ಧಾಂತ್​ ಚತುರ್ವೇದಿ ಮತ್ತು ದೀಪಿಕಾ ಪಡುಕೋಣೆ ನಡುವಿನ ಕಿಸ್ಸಿಂಗ್​ ದೃಶ್ಯ ಸಖತ್​ ವೈರಲ್​ ಆಗುತ್ತಿದೆ. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಸಿದರೆ, ಮತ್ತೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ.

ಬೀಚ್‌ನಲ್ಲಿ ಸಿದ್ಧಾರ್ಥ್‌ ಹಾಗೂ ದೀಪಿಕಾ ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾದ ಟೀಸರ್‌ನಲ್ಲಿ ಅನನ್ಯಾ ಪಾಂಡೆ ಕೂಡ ಕಾಣುತ್ತಾರೆ.

ADVERTISEMENT

‘ಗೆಹರಾಯಿಯಾ’ ಸಿನಿಮಾ ಟೀಸರ್‌ ಹಾಗೂ ಫೋಟೊಗಳನ್ನು ಸಿದ್ಧಾರ್ಥ್‌ ಹಾಗೂ ದೀಪಿಕಾ ಕೂಡ ಶೇರ್‌ ಮಾಡಿದ್ದಾರೆ. ಈ ಚಿತ್ರವನ್ನು ಅಮೆಜಾನ್ ಪ್ರೈಂ ಅರ್ಪಿಸಿದೆ.

1983ರ ಕ್ರಿಕೆಟ್​ ವಿಶ್ವಕಪ್​ ಕುರಿತ ಸಿನಿಮಾ ’83’ ಚಿತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಡಿ.24ರಂದು ‘83’ ಸಿನಿಮಾ ವಿಶ್ವಾದ್ಯಂತ ತೆರೆಕಾಣುತ್ತಿದೆ. ಕನ್ನಡಕ್ಕೂ ಈ ಸಿನಿಮಾ ಡಬ್​ ಆಗಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.