ADVERTISEMENT

ನಟಿಯ ಶವ ಪರೀಕ್ಷೆ: ಗೋವಾ ಪೊಲೀಸರಿಗೆ ಬೇಕಿದೆ ರಷ್ಯಾ ದೂತಾವಾಸ ಕಚೇರಿಯ ಅನುಮತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2021, 10:38 IST
Last Updated 23 ಆಗಸ್ಟ್ 2021, 10:38 IST
ಅಲೆಕ್ಸಾಂಡ್ರಾ ಜಾವಿ- ಇನ್‌ಸ್ಟಾಗ್ರಾಮ್‌ ಚಿತ್ರ
ಅಲೆಕ್ಸಾಂಡ್ರಾ ಜಾವಿ- ಇನ್‌ಸ್ಟಾಗ್ರಾಮ್‌ ಚಿತ್ರ   

ಕಳೆದ ವಾರ ಗೋವಾದ ಅಪಾರ್ಟ್‌ಮೆಂಟ್‌ನಲ್ಲಿ 24 ವರ್ಷದ ರಷ್ಯಾ ಮೂಲದ ನಟಿ ಅಲೆಕ್ಸಾಂಡ್ರಾ ಜಾವಿ ಶವವಾಗಿ ಪತ್ತೆಯಾಗಿದ್ದರು.

ಈ ಹಿನ್ನೆಲೆಯಲ್ಲಿ ನಟಿಯ ಮರಣೋತ್ತರ ಪರೀಕ್ಷೆ ನಡೆಸಲು ರಷ್ಯಾ ದೂತಾವಾಸ ಕಚೇರಿಯ ಅನುಮತಿಗಾಗಿ ಗೋವಾ ಪೊಲೀಸರು ಕಾಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

'ಕಾಂಚನಾ 3' ಸೇರಿದಂತೆ ಕೆಲ ತಮಿಳು ಚಿತ್ರಗಳಲ್ಲಿ ನಟಿಸಿದ್ದ ಅಲೆಕ್ಸಾಂಡ್ರಾ ಜಾವಿ ಕಳೆದ ಶುಕ್ರವಾರ ಉತ್ತರ ಗೋವಾದ ಸಿಯೋಲಿಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ADVERTISEMENT

'ನಟಿಯ ಶವಪರೀಕ್ಷೆ ನಡೆಸಲು ರಷ್ಯಾದ ದೂತಾವಾಸ ಕಚೇರಿಯಿಂದ ಅನುಮತಿ ಬೇಕಿದೆ. ಅಲ್ಲಿಯವರೆಗೂ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಿದ್ದೇವೆ' ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರು ಈಗಾಗಲೇ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಆಕೆಯ ಗೆಳೆಯನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅದೇ ಅಪಾರ್ಟ್‌ಮೆಂಟ್‌ನಲ್ಲಿ ಗೆಳೆಯನೊಂದಿಗೆ ಆಕೆ ವಾಸವಾಗಿದ್ದರು' ಎಂದು ಅಧಿಕಾರಿ ಹೇಳಿದ್ದಾರೆ.

ರಷ್ಯಾ ದೂತಾವಾಸ ಕಚೇರಿಯು ಪ್ರಕರಣದ ಮೇಲ್ವಿಚಾರಣೆ ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಲು ನಾವು ಸಿದ್ದರಿದ್ದೇವೆ ಎಂದು ಪೋಲಿಸ್‌ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.