ADVERTISEMENT

ಒಳ್ಳೆಯ ಹುಡುಗಿಯರಿಗೆ ಲತಾ, ಆಶಾ; ಕೆಟ್ಟವರಿಗೆ ನಾನು ಸಿಕ್ಕಿದ್ದೇನೆ: ಉಷಾ ಉತುಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2025, 12:54 IST
Last Updated 18 ನವೆಂಬರ್ 2025, 12:54 IST
   

ಒಳ್ಳೆ ಹುಡುಗಿಯರು ಗಾಯಕಿ ಲತಾ ಮಂಗೇಶ್ಕರ್ ಹಾಗೂ ಆಶಾ ಅವರನ್ನು ಪಡೆದಿದ್ದರೆ, ಕೆಟ್ಟ ಹುಡುಗಿಯರು ನನ್ನನ್ನು ಪಡೆದಿದ್ದಾರೆ ಎಂದು ಪಾಪ್ ಗಾಯಕಿ ಉಷಾ ಉತುಪ್ ಅವರು ಹಾಸ್ಯತ್ಮಕವಾಗಿ ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಏಳನೇ ಡೆಹ್ರಾಡೂನ್ ಸಾಹಿತ್ಯ ಉತ್ಸವದಲ್ಲಿ ಮಾತನಾಡಿರುವ ಪಾಪ್ ಗಾಯಕಿ ಉಷಾ ಉತುಪ್ ಅವರು, ‘ಲತಾ ಮಂಗೇಶ್ಕರ್ ಹಾಗೂ ಆಶಾ ಅವರಂತೆ ನಾನು ಎಂದಿಗೂ ಹಾಡಲು ಸಾಧ್ಯವಿಲ್ಲ. ಹಾಗಾಗಿ ಒಳ್ಳೆಯ ಹುಡುಗಿಯರು ಅವರನ್ನು ಪಡೆದಿದ್ದಾರೆ. ಕೆಟ್ಟ ಹುಡುಗಿಯರು ನನ್ನನ್ನು ಪಡೆದಿದ್ದಾರೆ’ ಎಂದು ಹಾಸ್ಯದಾಯಕ ಮಾತುಗಳನ್ನು ಆಡಿದ್ದಾರೆ.

‘1960 ರ ದಶಕದಲ್ಲಿ ಮದ್ರಾಸ್‌ನ ನೈನ್ ಜೆಮ್ಸ್‌ನಲ್ಲಿ ಮೊದಲು ಹಾಡಿದ್ದೆ. ಸವೇರಾದಲ್ಲಿ ನಡೆದ ಪ್ರದರ್ಶನಕ್ಕಾಗಿ ಗಾಯನ ಅಂದು ಕೇವಲ ₹126 ರೂ. ಬೆಲೆಯ ತನ್ನ ಮೊದಲ ಕಾಂಜೀವರಂ ಸೀರೆಯನ್ನು ಖರಿದಿಸಿದ್ದೆ’ ಎಂದು ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ADVERTISEMENT

ಈ ಪ್ರದರ್ಶನದಲ್ಲಿ 17 ಭಾರತೀಯ ಭಾಷೆಯ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.