ಅಶ್ವ ಫಿಲಂಸ್ ಲಾಂಛನದಲ್ಲಿ ಯಶೋಧರ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಹಚ್ಚೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದಲ್ಲಿ ನಾಯಕನಾಗಿ ಅಭಿಮನ್ಯು ನಟಿಸಿದ್ದಾರೆ.
ಚಿತ್ರದ ‘ವಿಘ್ನೇಶ್ವರಾಯ’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಯಶೋಧರ ಅವರೇ ಇದನ್ನು ಬರೆದಿದ್ದಾರೆ. ವಿವೇಕ್ ಚಕ್ರವರ್ತಿ ಈ ಹಾಡಿಗೆ ಸಂಗೀತ ನೀಡಿದ್ದು, ಶಿವಂ ದನಿಯಲ್ಲಿ ಹಾಡು ಮೂಡಿಬಂದಿದೆ.
‘ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. ‘ಹಚ್ಚೆ’ ಎಂಬ ಶೀರ್ಷಿಕೆ ಏಕೆ ಎನ್ನುವುದಕ್ಕೆ ಚಿತ್ರದಲ್ಲೇ ಉತ್ತರವಿದೆ. ಇದು ಒಂದು ಜಾನರ್‌ನ ಚಿತ್ರವಲ್ಲ. ಪ್ರೀತಿ, ಭಾವನೆಗಳು, ಸಸ್ಪೆನ್ಸ್, ಥ್ರಿಲ್ಲರ್.. ಹೀಗೆ ಹಲವು ಅಂಶಗಳ ಸಮ್ಮಿಶ್ರಣ. ಮೈಸೂರಿನ ರಂಗಭೂಮಿ ನಟ ಅಭಿಮನ್ಯು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದು, ಆದ್ಯ ಪ್ರಿಯ ಹಾಗೂ ಅನುಪ್ರೇಮ ನಾಯಕಿಯರಾಗಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲೇ ನಡೆದಿದೆ. ಕಲಾ ನಿರ್ದೇಶಕ ಶಂಕರ್ ನೇತೃತ್ವದಲ್ಲಿ ಏಳು ಅದ್ದೂರಿ ಸೆಟ್‌ಗಳನ್ನು ನಿರ್ಮಿಸಲಾಗಿತ್ತು. ಮುಂದಿನ ಎರಡು ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ’ ಎಂದು ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ಯಶೋಧರ ಮಾಹಿತಿ ನೀಡಿದರು.
ಚಿತ್ರಕ್ಕೆ ಚಂದ್ರು ಬಂಡೆ ಸಾಹಸ ನಿರ್ದೇಶನ, ಸ್ಟಾರ್ ನಾಗಿ ನೃತ್ಯ ನಿರ್ದೇಶನ ಹಾಗೂ ಯಾಸಿನ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.