ADVERTISEMENT

HBD ಕೀರ್ತಿ ಸುರೇಶ್‌: ‘ಸರ್ಕಾರು ವಾರಿ ಪಾಟ’ ಸೇರಿದ ಮಹಾನಟಿ

ಏಜೆನ್ಸೀಸ್
Published 17 ಅಕ್ಟೋಬರ್ 2020, 9:38 IST
Last Updated 17 ಅಕ್ಟೋಬರ್ 2020, 9:38 IST
ಕೀರ್ತಿ ಸುರೇಶ್
ಕೀರ್ತಿ ಸುರೇಶ್   

ಹೈದರಾಬಾದ್‌: ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್‌ರವರ 28ನೇ ವರ್ಷದ ಜನ್ಮದಿನಇಂದು (ಅ.17). ಈ ಸಂಭ್ರಮದ ದಿನದಂದುತೆಲುಗಿನ ಖ್ಯಾತ ನಟ ಮಹೇಶ್‌ ಬಾಬು ಕೀರ್ತಿಗೆಭರ್ಜರಿ ಉಡುಗೊರೆ ಕೊಟ್ಟಿದ್ದಾರೆ.

ಮಹೇಶ್‌ ಬಾಬು ಅಭಿನಯದಬಹು ನೀರಿಕ್ಷೆಯ‘ಸರ್ಕಾರು ವಾರಿ ಪಾಟ’ ಸಿನಿಮಾ ತಂಡಕ್ಕೆ ಕೀರ್ತಿ ಸುರೇಶ್‌ ಸೇರ್ಪಡೆಯಾಗಿದ್ದಾರೆ. ಇದನ್ನು ಸ್ವತಹ ಮಹೇಶ್‌ ಬಾಬು ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಆ ಮೂಲಕ ಕೀರ್ತಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ನಿಮ್ಮ ಜೊತೆ ಕೆಲಸ ಮಾಡುವುದು ಸ್ಮರಣೀಯ ಎಂದು ಫ್ರೀನ್ಸ್‌ಗೆ ಕೀರ್ತಿ ಧನ್ಯವಾದ ಹೇಳಿದ್ದಾರೆ.

ADVERTISEMENT

ಸರ್ಕಾರು ವಾರಿ ಪಾಟ’ ಸಿನಿಮಾಕ್ಕೆ ಗೀತಾ ಗೋವಿಂದಂ ಖ್ಯಾತಿಯ ಪರಶುರಾಮ್‌ ಅವರ ಚಿತ್ರಕಥೆ, ನಿರ್ದೇಶನವಿದೆ. ಈ ಸಿನಿಮಾವನ್ನು ಮೈತ್ರಿ ಮೂಮಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದು,ಎಸ್ಎಸ್ ತಮನ್ ಸಂಗೀತ ನಿರ್ದೇಶನವಿದೆ.

ಮಹೇಶ್‌ ಬಾಬು ಅವರ 45ನೇ ವರ್ಷದ ಹುಟ್ಟುಹಬ್ಬದಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ. ಭಾರತ ಮತ್ತು ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.