ADVERTISEMENT

ದಳಪತಿ ವಿಜಯ್‌ ಜನ್ಮದಿನಾಚರಣೆ: 'ಬೀಸ್ಟ್' ಸಿನಿಮಾ ಪೋಸ್ಟರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 7:11 IST
Last Updated 22 ಜೂನ್ 2021, 7:11 IST
ವಿಜಯ್‌ ದಳಪತಿ
ವಿಜಯ್‌ ದಳಪತಿ   

‘ಕೊರೊನಾ’ ಕಾರಣದಿಂದಾಗಿ ತಮಿಳು ನಟ ದಳಪತಿ ವಿಜಯ್‌ ಅವರ ಜನ್ಮದಿನಾಚರಣೆ ಈ ವರ್ಷವೂ ಸರಳವಾಗಿ ನಡೆದಿದೆ.'ಬೀಸ್ಟ್' ಚಿತ್ರತಂಡ ವಿಜಯ್‌ ಅವರ ವಿಶೇಷ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕವಿಶೇಷ ಉಡುಗೊರೆ ನೀಡಿದೆ.

ಪ್ರತಿ ವರ್ಷ ಅಭಿಮಾನಿಗಳು ವಿಜಯ್‌ ಜನ್ಮದಿನವನ್ನು ಭರ್ಜರಿಯಾಗಿ ಆಚರಿಸುತ್ತಿದ್ದರು. ವಿಜಯ್‌ ಅಭಿನಯದ ಚಿತ್ರಗಳನ್ನು ಮರು ಬಿಡುಗಡೆ ಮಾಡಿ ಸಂಭ್ರಮಿಸುತ್ತಿದ್ದರು. ರಕ್ತದಾನ, ಅನ್ನಸಂತರ್ಪಣೆ, ಪುಸ್ತಕ ವಿತರಣೆಯಂತಹ ಸಾಮಾಜಿಕ ಕಾರ್ಯಗಳ ಮೂಲಕ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು.

ಕೊರೊನಾ ಕಾರಣ ಸ್ವತಃ ವಿಜಯ್‌ ಅವರೇ ‘ಈ ಬಾರಿ ಸಂಭ್ರಮಾಚರಣೆ ಬೇಡ‘ ಎಂದು ಮನವಿ ಮಾಡಿದ್ದ ಕಾರಣ, ಸರಳವಾಗಿ ಹುಟ್ಟು ಹಬ್ಬ ಆಚರಿಸಿದ್ದಾರೆ ಅಭಿಮಾನಿಗಳು. ಕಳೆದ ವರ್ಷ ಕೂಡ ವಿಜಯ್‌ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ADVERTISEMENT

ಬೀಸ್ಟ್‌ ಸಿನಿಮಾದ ಪೋಸ್ಟರ್‌ ನೋಡಿದರೆ ಇದೊಂದು ಮಾಸ್‌ ಸಿನಿಮಾ ಎಂಬುದು ಗೊತ್ತಾಗುತ್ತದೆ. ಸನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್‌ ದೀಲಿಪ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪೂಜಾ ಹೆಗ್ಡೆ ಮತ್ತು ವಿಜಯ್‌ ಜೊತೆಯಾಗಿ ನಟಿಸುತ್ತಿದ್ದಾರೆ.

47ನೇ ವಸಂತಕ್ಕೆ ಕಾಲಿಟ್ಟಿರುವ ನಟ ವಿಜಯ್‌ಗೆ ಅಭಿಮಾನಿಗಳು ಮತ್ತು ಸಿನಿಮಾರಂಗದ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.