ADVERTISEMENT

ಕ್ರಿಕೆಟರ್ ಹರ್ಭಜನ್ ಸಿಂಗ್ ಅಭಿನಯದ ತಮಿಳು ಸಿನಿಮಾ ಅಮೆಜಾನ್ ಪ್ರೈಂನಲ್ಲಿ

ಅ.15 ಕ್ಕೆ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2021, 12:27 IST
Last Updated 9 ಅಕ್ಟೋಬರ್ 2021, 12:27 IST
ಫ್ರೆಂಡ್‌ಶಿಫ್ ಸಿನಿಮಾ ಪೋಸ್ಟರ್
ಫ್ರೆಂಡ್‌ಶಿಫ್ ಸಿನಿಮಾ ಪೋಸ್ಟರ್   

ಬೆಂಗಳೂರು: ಕ್ರಿಕೆಟರ್ ಹರ್ಭಜನ್ ಸಿಂಗ್ ಅಭಿನಯಿಸಿ ಗಮನ ಸೆಳೆದಿರುವ ತಮಿಳು ಸಿನಿಮಾ 'ಫ್ರೆಂಡ್‌ಶಿಪ್‘ ಇದೆ ಅ. 15 ಕ್ಕೆ ಅಮೆಜಾನ್ ಪ್ರೈಂನಲ್ಲಿ ಲಭ್ಯವಾಗಲಿದೆ.

ಇಂದು ಟ್ವಿಟರನಲ್ಲಿ ಹರ್ಭಜನ್ ಸಿಂಗ್ ಈ ವಿಚಾರವನ್ನು ಹಂಚಿಕೊಂಡು,ಫ್ರೆಂಡ್‌ಶಿಪ್ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕ್ರೀಡೆ, ಗೆಳೆತನ, ರಾಜಕೀಯ ಹಾಗೂ ಕ್ರೈಂ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಹರ್ಭಜನ್ ಸಿಂಗ್ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಅರ್ಜುನ್ ಸರ್ಜಾ, ಲೋಸ್ಲಿಯಾ ಮರಿಯಾಸೇನ್, ರಾಬಿನ್ ಪ್ರಭು ಅಭಿನಯಿಸಿರುವ ಈ ಚಿತ್ರ ಕಳೆದ ಸೆ. 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆ ಗಳಿಸಿತ್ತು.

ADVERTISEMENT

ಮೂಲತಃ ಮಲೆಯಾಳಂ 'ಕ್ವೀನ್' ಸಿನಿಮಾದ ರಿಮೇಕ್ ಆದ ಫ್ರೆಂಡ್‌ಶಿಪ್ ಸಿನಿಮಾವನ್ನು ತಮಿಳಿನಲ್ಲಿ ಜಾನ್ ಪೌಲ್ ರಾಜ್ ಹಾಗೂ ಶಾಮ್ ಸೂರ್ಯಾ ನಿರ್ದೇಶಿಸಿದ್ದಾರೆ. ಜೆಪಿಆರ್ ಹಾಗೂ ಸ್ಟ್ಯಾಲಿನ್ ಬಂಡವಾಳ ಹೂಡಿದ್ದಾರೆ.

ಸಿನಿಪ್ರಿಯರು ಹಾಗೂ ಹರ್ಭಜನ್ ಸಿಂಗ್ ಅಭಿಮಾನಿಗಳು ಈ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಗುರುತಿಸಿಕೊಂಡಿದ್ದ ಸಿಂಗ್, ತಮಿಳುನಾಡು ಹಾಗೂ ತಮಿಳು ಭಾಷೆ ಜೊತೆ ವಿಶೇಷ ನಂಟು ಹೊಂದಿದ್ದಾರೆ. ಈ ಮೂಲಕ ಅವರು ತಮಿಳುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಸಿನಿಮಾ ಮೂಲಕವೂ ಅವರು ತಮಿಳಿಗರ ಮನ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.