ಶ್ರೀನಗರ: ಇದೇ ಮೊದಲ ಬಾರಿಗೆ ಕಾಶ್ಮೀರಿ ಮತ್ತು ಕನ್ನಡ ಭಾಷೆಯಲ್ಲಿ ಹರಮುಖ ಎನ್ನುವ ಚಲನಚಿತ್ರ ನಿರ್ಮಾಣವಾಗಿದ್ದು, ಜೂನ್18ರಂದು ಜಮ್ಮು ಮತ್ತು ಕಾಶ್ಮೀರದ ಐನಾಕ್ಸ್ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.
ಸೋಮವಾರ ನಡೆದ ಸಮಾರಂಭದಲ್ಲಿ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಆಯಶ್ ಆರಿಫ್ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರದ ಶೀರ್ಷಿಕೆಯು ಮಧ್ಯ ಕಾಶ್ಮೀರದ ಗಂಡೇರ್‌ಬಲ್ ಜಿಲ್ಲೆಯಲ್ಲಿ ದಕ್ಷಿಣಕ್ಕೆ ಸಿಂಧೂ ನದಿ ಮತ್ತು ಉತ್ತರಕ್ಕೆ ಕಿಶನ್‌ಗಂಗಾ ನದಿಯ ನಡುವೆ ಇರುವ ಹರಮುಖ ಪರ್ವತದಿಂದ ಪ್ರೇರಿತವಾಗಿದೆ. ಇದನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಹೆಸರನ್ನು ಇಡಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
16 ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗೆದ್ದಿರುವ ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ನಟ ಟಿ. ಎಸ್. ನಾಗಾಭರಣ ಸಹ ಪಾತ್ರವರ್ಗದ ಭಾಗವಾಗಿದ್ದಾರೆ.
ಈ ಚಿತ್ರವು ಕಾಶ್ಮೀರ ಮತ್ತು ಕರ್ನಾಟಕದ ನಡುವಿನ ಒಂದು ಕನಸು, ಸೇತುವೆ ಮತ್ತು ಬಂಧವಾಗಿದೆ. ಗಡಿಗಳನ್ನು ಮೀರಿದ ಸ್ನೇಹದ ಸಂದೇಶವನ್ನು ಇದು ಹೊಂದಿದೆ ಎಂದು ಆರಿಫ್ ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.