ADVERTISEMENT

ಭಜರಂಗಿ ಭಾಯ್‌ಜಾನ್‌ಗಾಗಿ ಕಾಯುತ್ತಿದ್ದೇನೆ: ಹರ್ಷಾಲಿ ಮಲ್ಹೋತ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2022, 7:38 IST
Last Updated 28 ಮಾರ್ಚ್ 2022, 7:38 IST
ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್‌ಜಾನ್
ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್‌ಜಾನ್   

ಬೆಂಗಳೂರು: 2015ರಲ್ಲಿ ತೆರೆಕಂಡಿದ್ದ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್‌ಜಾನ್ ಚಿತ್ರ, ಜನರ ಪ್ರಶಂಸೆಗೆ ಪಾತ್ರವಾಗಿತ್ತು.

ಸರಳ ಮತ್ತು ಆಪ್ತ ಕಥೆಯನ್ನೊಳಗೊಂಡ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯನ್ನೂ ಕಂಡಿತ್ತು.

ಸಲ್ಲೂ ಬಾಯ್ ಜತೆಗೆ ಈ ಚಿತ್ರದಲ್ಲಿ ಕರೀನಾ ಕಪೂರ್, ನವಾಜುದ್ದೀನ್ ಸಿದ್ದಿಕಿ ಹಾಗೂ ಬಾಲನಟಿ ಹರ್ಷಾಲಿ ಮಲ್ಹೋತ್ರಾ ಅಭಿನಯಿಸಿದ್ದರು.

ADVERTISEMENT

ಸಲ್ಮಾನ್ ಅವರು ಭಜರಂಗಿ ಭಾಯ್‌ಜಾನ್ ಚಿತ್ರದ ಮುಂದುವರಿದ ಭಾಗವನ್ನು ಮಾಡುತ್ತಿದ್ದು, ಅದರಲ್ಲಿ ತಮಗೂ ಒಂದು ಪಾತ್ರ ಇರಬಹುದು ಎಂದು ಹರ್ಷಾಲಿ ಮಲ್ಹೋತ್ರಾ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕಬೀರ್ ಖಾನ್ ನಿರ್ದೇಶನದ ಈ ಚಿತ್ರಕ್ಕೆ ಕೆವಿ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು.

ಚಿತ್ರದ ಮುಂದಿನ ಭಾಗ ಶೀಘ್ರದಲ್ಲೇ ಸೆಟ್ಟೇರಲಿದ್ದು, ಅದರಲ್ಲಿ ಪಾತ್ರ ಮಾಡುವ ಬಯಕೆ ಇದೆ, ಅದಕ್ಕಾಗಿ ಸಲ್ಮಾನ್ ಖಾನ್ ಅಂಕಲ್ ಅವರ ಕರೆಗಾಗಿ ಕಾಯುತ್ತಿದ್ದೇನೆ ಎಂದು ಹರ್ಷಾಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.