ADVERTISEMENT

ಮೆಟ್ರೊದಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಏಪ್ರಿಲ್ 2023, 13:20 IST
Last Updated 12 ಏಪ್ರಿಲ್ 2023, 13:20 IST
 ಹೇಮಾ ಮಾಲಿನಿ
ಹೇಮಾ ಮಾಲಿನಿ   

ಮುಂಬೈ: ಹಿರಿಯ ನಟಿ ಹಾಗೂ ಮಥುರಾ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಮುಂಬೈ ಮೆಟ್ರೊದಲ್ಲಿ ಪ್ರಯಾಣಿಸಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು ನನ್ನ ಅದ್ಭುತ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದು ಬಯಸುತ್ತೇನೆ. ಕಾರು ಬಿಟ್ಟು ಜೂಹುವಿನ ದಹಿಸರ್‌ಗೆ ಮುಂಬೈ ಮೆಟ್ರೊದಲ್ಲಿ ಪ್ರಯಾಣಿಸಿದೆ. ವಾವ್‌! ಎಂತ ಅದ್ಭುತ ಅನುಭವ.. ಬೇರೆ ಪ್ರಯಾಣ ಎಷ್ಟು ಕಠಿಣವಾಗಿದೆ. ಆದರೆ ಮೆಟ್ರೊ ಪ್ರಯಾಣ ತುಂಬಾ ಸುಂದರ, ಸರಳ ಹಾಗೂ ಸ್ವಚ್ಛ ಎಂದು ಬಣ್ಣಿಸಿದ್ದಾರೆ.

ಇದೇ ವೇಳೆ ಮೆಟ್ರೊದಲ್ಲಿ ಹೇಮಾ ಮಾಲಿನಿ ಅವರು ಪ್ರಯಾಣಿಸುವಾಗ ಸಹ ಪ್ರಯಾಣಿಕರು ಹೇಮಾ ಅವರನ್ನು ಕಂಡು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟಿದ್ದಾರೆ.

ADVERTISEMENT

ಬಳಿಕ ದಹಿಸರ್‌ನಲ್ಲಿ ಮೆಟ್ರೊದಿಂದ ಇಳಿದು ಹೇಮಾ ಅವರು ಕಾರಿನಲ್ಲಿ ತೆರಳದೇ ಆಟೋದಲ್ಲಿ ಮನೆಗೆ ತೆರಳಿದ್ದಾರೆ. ಆಟೋ ಹಾಗೂ ಮೆಟ್ರೊದಲ್ಲಿನ ಸಾರ್ವಜನಿಕರೊಂದಿಗಿನ ಪಯಣ ತುಂಬಾ ಅದ್ಭುತವಾಗಿತ್ತು. ನನಗಂತೂ ಇದೊಂದು ಹೊಸ ಅನುಭೂತಿ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.