ADVERTISEMENT

RRR ರೀತಿಯ ಸಿನಿಮಾಗಳು ಹಾಲಿವುಡ್‌ನಲ್ಲೂ ಬರಬೇಕಿದೆ: ಬ್ರಿಟಿಷ್ ನಟ ಜೇಮಿ ಹ್ಯಾರಿಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಏಪ್ರಿಲ್ 2023, 10:19 IST
Last Updated 10 ಏಪ್ರಿಲ್ 2023, 10:19 IST
ಜೇಮಿ ಹ್ಯಾರಿಸ್
ಜೇಮಿ ಹ್ಯಾರಿಸ್   

ಲಂಡನ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಸಿನಿಮಾ ದೇಶ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಅದರಲ್ಲೂ ಆಸ್ಕರ್ ಪ್ರಶಸ್ತಿ ಪಡೆದ ನಂತರ ಹಾಲಿವುಡ್ ಮಂದಿ ಈ ಸಿನಿಮಾವನ್ನು ಬೆರಗುಗಣ್ಣಿನಿಂದ ನೋಡಿದ್ದಾರೆ.

ಇದೀಗ ಬ್ರಿಟಿಷ್ ನಟ ಜೇಮಿ ಹ್ಯಾರಿಸ್ ಅವರು ಆರ್‌ಆರ್‌ಆರ್ ಸಿನಿಮಾವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಆರ್‌ಆರ್‌ಆರ್ ರೀತಿಯ ಸಿನಿಮಾಗಳು ಹಾಲಿವುಡ್‌ನಲ್ಲಿಯೂ ಬರಬೇಕು' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ 'ಚಿತ್ತಾಕರ್ಷಕವಾಗಿದೆ' ಎಂದು ಬಣ್ಣಿಸಿದ್ದಾರೆ.

ADVERTISEMENT

ಆರ್‌ಆರ್‌ಆರ್ ಒಂದು ಪ್ರಕಾರದಿಂದ (ಜೀನರ್) ಮತ್ತೊಂದು ಪ್ರಕಾರಕ್ಕೆ ಕರೆದೊಯ್ಯುತ್ತದೆ. ನಾಟು ನಾಟು ಹಾಡು ಹಾಗೂ ನೃತ್ಯ ಸಂಯೋಜನೆಯಂತೂ ಅದ್ಭುತ ಎಂದು ಹೊಗಳಿದ್ದಾರೆ.

ಇಂಡಿಯಾ ಟುಡೇ ಟಿವಿ ವಾಹಿನಿ ಜೇಮಿ ಹ್ಯಾರಿಸ್ ಅವರನ್ನು ಸಂದರ್ಶಿಸಿದೆ. ಪ್ರೈಂನಲ್ಲಿ ಬಿತ್ತರವಾಗುವ ‘ಕಾರ್ನಿವಲ್ ರೊ’ ವೆಬ್‌ ಸಿರೀಸ್‌ನಲ್ಲಿ ಖಳನಟನಾಗಿ ಜೇಮಿ ಹ್ಯಾರಿಸ್ ಮಿಂಚಿದ್ದಾರೆ. ಅವರು ಅನೇಕ ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.