ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಕಾಲಿಗೆ ಗಾಯ ಮಾಡಿಕೊಂಡಿದ್ದು, ಶೀಘ್ರದಲ್ಲೇ ಚೇತರಿಸಿಕೊಂಡು ನಟನೆಗೆ ಹಿಂದಿರುಗುವುದಾಗಿ ಹೇಳಿದ್ದಾರೆ.
ಪ್ಲಾಸ್ಟರ್ ಹಾಕಿರುವ ಕಾಲಿನ ಚಿತ್ರದ ಜೊತೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ, ಜಿಮ್‌ನಲ್ಲಿ ವರ್ಕೌಟ್ ವೇಳೆ ಗಾಯಗೊಂಡಿದ್ದಾಗಿ ಬರೆದುಕೊಂಡಿದ್ದಾರೆ.
ಗಾಯದ ಕಾರಣದಿಂದ ಚಿತ್ರೀಕರಣದಲ್ಲಿ ವಿಳಂಬಕ್ಕಾಗಿ ತಮ್ಮ ಮುಂಬರುವ ಚಿತ್ರಗಳಾದ 'ಥಮ', 'ಸಿಕಂದರ್' ಮತ್ತು 'ಕುಬೇರ’ ನಿರ್ದೇಶಕರ ಬಳಿ ಕ್ಷಮೆ ಕೇಳಿದ್ದಾರೆ.
‘ಮುಂದಿನ ಕೆಲವು ವಾರಗಳು ಅಥವಾ ತಿಂಗಳುಗಳಲ್ಲಿ ಹಿಂದಿರುಗುವ ವಿಶ್ವಾಸದಲ್ಲಿದ್ದೇನೆ. ಆದರೆ, ಅದು ದೇವರಿಗೆ ಮಾತ್ರ ಗೊತ್ತು. ಥಮ, ಸಿಕಂದರ್ ಮತ್ತು ಕುಬೇರ ಚಿತ್ರಗಳ ಚಿತ್ರೀಕರಣಕ್ಕೆ ಶೀಘ್ರ ಹಿಂದಿರುಗುವ ವಿಶ್ವಾಸದಲ್ಲಿದ್ದೇನೆ. ನನ್ನಿಂದಾಗಿ ಚಿತ್ರೀಕರಣ ವಿಳಂಬಕ್ಕಾಗಿ ನಿರ್ದೇಶಕರಿಗೆ ಕ್ಷಮೆ ಕೇಳುತ್ತೇನೆ’ಎಂದು ಬರೆದುಕೊಂಡಿದ್ದಾರೆ.
ನಡೆಯಲು ಸಾಧ್ಯವಾದ ಕೂಡಲೇ ನಾನು ಚಿತ್ರೀಕರಣಕ್ಕೆ ಹಿಂದಿರುಗುತ್ತೇನೆ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಜೊತೆ ನಟಿಸಿರುವ ಇತ್ತೀಚೆಗೆ ತೆರೆ ಕಂಡ ಪುಷ್ಪ–2 ಭಾರಿ ಯಶಸ್ಸಿನೊಂದಿಗೆ ₹ 1,831 ಕೋಟಿ ಗಳಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.