ಸಿನಿಮಾ (ಪ್ರಾತಿನಿಧಿಕ ಚಿತ್ರ)
ನವದೆಹಲಿ: ಈ ಬಾರಿ ವರ್ಷದ ಮೊದಲಾರ್ಧದಲ್ಲಿ ಭಾರತೀಯ ಚಿತ್ರರಂಗ ಬಾಕ್ಸ್ ಆಫೀಸ್‌ನಲ್ಲಿ ₹5,723 ಕೋಟಿ ಗಳಿಕೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 14ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
‘ಇಂಡಿಯಾ ಬಾಕ್ಸ್ ಆಫೀಸ್ ರಿಪೋರ್ಟ್ ಜನವರಿ–ಜೂನ್ 2025’ ವರದಿ ಪ್ರಕಾರ ಈ ಬಾರಿ ಕಳೆದ 6 ತಿಂಗಳಲ್ಲಿ 17 ಸಿನಿಮಾಗಳು ₹100ಕೋಟಿಗೂ ಹೆಚ್ಚು ಗಳಿಕೆ ಮಾಡಿವೆ. ಕಳೆದ ವರ್ಷ ಅರ್ಧವರ್ಷದಲ್ಲಿ 10 ಸಿನಿಮಾಗಳು ₹100 ಕೋಟಿ ಗಳಿಸಿದ್ದವು.
2025ರ ಮೊದಲಾರ್ಧದಲ್ಲಿ ಒಂದು ಸಿನಿಮಾ ಮಾತ್ರ ₹250 ಕೋಟಿ ದಾಟಿದ್ದು, ಉಳಿದ 16 ಸಿನಿಮಾಗಳು ₹100 ಕೋಟಿ ದಾಟಲು ಯಶಸ್ವಿಯಾಗಿವೆ. ಈ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಪಟ್ಟಿಯಲ್ಲಿ ವಿಕ್ಕಿ ಕೌಶಲ್ ಅಭಿನಯದ ’ಛಾವಾ’ ಚಿತ್ರ ಮೊದಲ ಸ್ಥಾನದಲ್ಲಿದ್ದು, ₹693 ಕೋಟಿ ಗಳಿಸಿದೆ. ಇದರಂತೆ ತೆಲುಗಿನ 'ಸಂಕ್ರಾಂತಿಕಿ ವಸ್ತುನ್ನಂ' ಚಿತ್ರ ಕೂಡ ದೇಶದಲ್ಲಿ ಜನರ ಮೆಚ್ಚುಗೆ ಗಳಿಸಿದ್ದು, ಉತ್ತಮ ಗಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ.
ಜೂನ್‌ನಲ್ಲೇ ಸುಮಾರು ₹ 900 ಕೋಟಿ ಗಳಿಕೆಯಾಗಿದ್ದು. ಈ ತಿಂಗಳಲ್ಲಿ ಅಮೀರ್ ಖಾನ್ ನಟನೆಯ ಹಿಂದಿ ಚಿತ್ರ ‘ಸಿತಾರೆ ಜಮೀನ್ ಪರ್’ ಮತ್ತು ಅಕ್ಷಯ್ ಕುಮಾರ್ ನಟನೆಯ ‘ಹೌಸ್‌ಫುಲ್–5’ ಚಿತ್ರಗಳು ಅತಿ ಹೆಚ್ಚು ಗಳಿಕೆ ಕಂಡಿವೆ.
ಇನ್ನುಳಿದಂತೆ ಜೂನ್‌ನಲ್ಲಿ ತೆರೆಕಂಡ ತಮಿಳು– ತೆಲುಗು ಭಾಷೆಗಳ ‘ಕುಬೇರ’, ‘F1’ ಸೇರಿ ಹಲವು ಚಿತ್ರಗಳು ಗಳಿಕೆಯ ಹಾದಿಯಲ್ಲಿವೆ.
ಮುಂಬರುವ ದಿನಗಳಲ್ಲಿ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’, ವಾರ್ 2, ‘ಕೂಲಿ’, ‘ಅಖಂಡ 2’, ‘ಓಜಿ’ ಸೇರಿ ಹಲವು ಚಿತ್ರಗಳು ಹಿಟ್ ಸಿನಿಮಾಗಳ ಸಾಲಿಗೆ ಸೇರಲು ತಯಾರಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.