ADVERTISEMENT

Horror Thriller Movie: ‘ಇನಿಯನ ಆತ್ಮ’ದ ಹಿಂದೆ ಹೊಸಬರು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 23:30 IST
Last Updated 11 ನವೆಂಬರ್ 2025, 23:30 IST
ನಿಶಾ ರೆಡ್ಡಿ
ನಿಶಾ ರೆಡ್ಡಿ   

ಬಹುತೇಕ ಹೊಸಬರಿಂದಲೇ ಕೂಡಿರುವ ‘ಇನಿಯನ ಆತ್ಮ’ ಚಿತ್ರದ ಟ್ರೇಲರ್‌ ಮತ್ತು ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ನರೇಶ್ ಸಿದ್ದಘಟ್ಟ ಕಥೆ, ನಿರ್ದೇಶನವಿದೆ. ಶ್ರೀ ವಿನಾಯಕ ವೆಂಕಟೇಶ್ವರ ಫಿಲ್ಮ್ಸ್‌ ಅಡಿಯಲ್ಲಿ ಬಿ.ಕಲಾವತಿ ನಿರ್ಮಾಣ ಮಾಡಿದ್ದಾರೆ. 

‘ಏಳು ಜನ ಪ್ರವಾಸಕ್ಕೆಂದು ದೂರದ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ಇವರನ್ನೆ ಗುರಿಯಾಗಿಸಿಕೊಂಡು ಒಂದಷ್ಟು ಘಟನೆಗಳು ನಡೆಯುವುದು ಏಕೆ ಎಂಬುದೇ ಚಿತ್ರಕಥೆ. ಕರ್ಮ ಯಾರನ್ನೂ ಬಿಡುವುದಿಲ್ಲ ಎಂಬ ವಿಷಯವನ್ನು ಹಾರರ್, ಥ್ರಿಲ್ಲರ್ ರೀತಿಯಲ್ಲಿ ಹೇಳಿದ್ದೇವೆ. ಒಂದಷ್ಟು ಹಾಸ್ಯಮಯ ಸನ್ನಿವೇಶಗಳು ಇವೆ. ಕೋಲಾರ, ಚಿಕ್ಕಬಳ್ಳಾಪುರ ಮೊದಲಾದೆಡೆ ಚಿತ್ರೀಕರಣ ನಡೆಸಲಾಗಿದೆ’ ಎಂದರು ನಿರ್ದೇಶಕ.

ನಾಯಕ ಸಿದ್ದಾರ್ಥ್ ಹರಿಗೆ ನಿಶಾರೆಡ್ಡಿ ಜೋಡಿಯಾಗಿದ್ದಾರೆ. ಕೋಲಾರ ಸೂರ್ಯ, ರಾಜ್‌ವೀರ್, ಕಿಟ್ಟಿ ತಾಳಿಕೋಟೆ, ಆದಿ ಮಧುಗಿರಿ, ಸುಶ್ಮಿತ, ನಯನಾ ಮುಂತಾದವರು ನಟಿಸಿದ್ದಾರೆ. ಎ.ಟಿ.ರವೀಶ್‌ ಸಂಗೀತ, ಚರಣ್‌ತೇಜ್‌ ಛಾಯಾಗ್ರಹಣ, ಪವನ್.ಬಿ.ಕೆ  ಸಂಕಲನ ಚಿತ್ರಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.