ADVERTISEMENT

ಪ್ರೀತಿಗೆ ಎರಡು ವರ್ಷದ ಸಂಭ್ರಮ: ಪ್ರಿಯಕರನ ಜತೆಗಿನ ಫೋಟೊ ಪೋಸ್ಟ್ ಮಾಡಿದ ಇರಾ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜೂನ್ 2022, 10:52 IST
Last Updated 2 ಜೂನ್ 2022, 10:52 IST
ಇರಾ ಖಾನ್-ನೂಪುರ್ ಶಿಖರೆ
ಇರಾ ಖಾನ್-ನೂಪುರ್ ಶಿಖರೆ   

ಬೆಂಗಳೂರು: ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್, ತಮ್ಮ ಪ್ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸದಾ ಪೋಸ್ಟ್ ಮಾಡುತ್ತಿರುತ್ತಾರೆ.

ಫಿಟ್ನೆಸ್ ಎಕ್ಸ್‌ಪರ್ಟ್ ನೂಪುರ್ ಶಿಖರೆ ಜತೆಗಿನ ಪ್ರೇಮಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

2020ರಲ್ಲಿ ಆರಂಭವಾದ ನಮ್ಮ ಪ್ರೀತಿಗೆ ಈಗ ಎರಡು ವರ್ಷ ತುಂಬಿತು. ಐ ಲವ್‌ ಯೂ.. ಎಂದು ನೂಪುರ್ ಜತೆ ಈಜುಕೊಳದಲ್ಲಿ ಇರುವ ಫೋಟೊವನ್ನು ಇರಾ ಖಾನ್ ಪೋಸ್ಟ್ ಮಾಡಿದ್ದಾರೆ.

ADVERTISEMENT

ಇರಾ ಖಾನ್ ಹುಟ್ಟುಹಬ್ಬದ ಸಂದರ್ಭದಲ್ಲಿ ತೆಗೆದಿರುವ ಫೋಟೊಗಳು ಇವಾಗಿದ್ದು, ಆ ಸಂದರ್ಭದಲ್ಲಿ ಬಿಕಿನಿ ಧರಿಸಿದ್ದರು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.

ಆದರೆ, ಟೀಕೆಗಳಿಗೆ ಕಿವಿಗೊಡದೆ ಇರಾ ಖಾನ್, ಮತ್ತಷ್ಟು ಫೋಟೊ ಪೋಸ್ಟ್ ಮಾಡುವ ಮೂಲಕ ಟ್ರೋಲ್‌ಗಳ ಬಾಯಿಮುಚ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.