ADVERTISEMENT

ಅಭಿಮಾನಿ ಕತ್ತಲ್ಲಿ ಜಾನೂ ಹಚ್ಚೆ!

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 20:15 IST
Last Updated 30 ಏಪ್ರಿಲ್ 2019, 20:15 IST
ಜಾಹ್ನವಿ ಕಪೂರ್‌
ಜಾಹ್ನವಿ ಕಪೂರ್‌   

ಸಣ್ಣ ವಯಸ್ಸಿಗೇ ಬಾಲಿವುಡ್‌ ದಿಗ್ಗಜರ ಸಾಲಿಗೆ ಸೇರಿರುವ ನಟಿ ಜಾಹ್ನವಿ ಕಪೂರ್‌. ಸಾಮಾಜಿಕ ಮಾಧ್ಯಮಗಳಲ್ಲಿಯೂ, ಹೋದಲ್ಲಿ ಬಂದಲ್ಲಿಯೂಜಾಣೆ ಜಾನೂಗೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಬಾಂದ್ರಾದಲ್ಲಿ ನಿತ್ಯ ಹೋಗುವ ಜಿಮ್‌ಗೆ ಹೋಗುವಾಗಲೂ ಬರುವಾಗಲೂ ಒಂದಷ್ಟು ಅಭಿಮಾನಿಗಳು ಸೆಲ್ಫಿಗಾಗಿ ಕಾಯುತ್ತಿರುತ್ತಾರೆ.

ಜಾನೂ ಮೊನ್ನೇ ತಮ್ಮ ಪಾಡಿಗೆ ಜಿಮ್‌ನಿಂದ ಹೊರಬರುತ್ತಿದ್ದರೆ ಒಬ್ಬ ಹುಡುಗಿ ಓಡಿಬಂದು, ‘ನಿಮ್ಮ ಜತೆ ಸೆಲ್ಫಿ ಬೇಕು’ಎಂದಳು. ಅವಳ ಬೆನ್ನಿಗೇ ಒಂದು ಶಿಫಾರಸು ಬಂತು– ‘ಅವಳ ಕತ್ತಲ್ಲಿ ನಿಮ್ಮ ಹೆಸರಿನ ಮೊದಲ ಅಕ್ಷರಗಳ ಹಚ್ಚೆ (ಟ್ಯಾಟೂ) ಇದೆ. ಅದಕ್ಕೆ ಅವಳಿಗೆ ಸೆಲ್ಫಿ ಬೇಕಂತೆ’ಎಂದು!

ಇವರಿಗೇನು ತಲೆ ಕೆಟ್ಟಿದೆಯೇ ಎಂದು ಸೊಟ್ಟಗೆ ನೋಡಿದ ಜಾನೂಗೆ ನಂಬಲಾಗದ ಸಾಕ್ಷ್ಯ ಆ ಹುಡುಗಿಯ ಕತ್ತಿನಲ್ಲಿತ್ತು! ‘ಜೆ’ ಮತ್ತು ’ಕೆ‘ ಎಂಬ ಇಂಗ್ಲಿಷ್‌ ಅಕ್ಷರಗಳ ಟ್ಯಾಟೂ!

ADVERTISEMENT

‘ಇದೆಂತಾ ಕ್ರೇಜ್‌! ನನಗೆ ನಂಬಲಾಗಲಿಲ್ಲ. ನಾನು ಮತ್ತು ತಂಗಿ ಖುಷಿ ಒಂದೇ ಬಗೆಯ ಟ್ಯಾಟೂ ಹಾಕ್ಕೋಬೇಕು ಅಂತ ಯೋಚಿಸ್ತಿದ್ವಿ. ಆದರೆ ಅಭಿಮಾನಿಯಾಗಿ ಆ ಹುಡುಗಿ ತೋರಿಸಿದ ಪ್ರೀತಿಯ ಮುಂದೆ ಕರಗಿ ಹೋದೆ‘ ಎಂದು ಜಾನೂ ಹೇಳಿಕೊಂಡಿದ್ದಾಳೆ.

ಜಾನೂ ನಟಿಸಿರುವ ಒಂದೇ ಒಂದು ಚಿತ್ರ (ಧಡಕ್) ತೆರೆಕಂಡಿದೆ. ಆದರೆ ದಶಕಗಳಿಂದ ಚಾಲ್ತಿಯಲ್ಲಿರುವ ನಟಿಯರಿಗಿಂತ ಹೆಚ್ಚಿನ ಅಭಿಮಾನಿ ಬಳಗವನ್ನು ಸಂಪಾದಿಸಿಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.