ADVERTISEMENT

Video | ಜವಾನ್: ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ಭರ್ಜರಿ ಡಾನ್ಸ್ ಮಾಡಿದ ಶಾರುಖ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2023, 15:32 IST
Last Updated 30 ಆಗಸ್ಟ್ 2023, 15:32 IST
ಚಿತ್ರಕೃಪೆ( ಸಾಮಾಜಿಕ ಜಾಲತಾಣ ಎಕ್ಸ್)
ಚಿತ್ರಕೃಪೆ( ಸಾಮಾಜಿಕ ಜಾಲತಾಣ ಎಕ್ಸ್)   

ಬೆಂಗಳೂರು: ಚೆನ್ನೈನಲ್ಲಿ ನಡೆದ ‘ಜವಾನ್‘ ಸಿನಿಮಾದ ಪ್ರೀ ರಿಲೀಸ್‌ ಈವೆಂಟ್‌ನ ವೇದಿಕೆಯಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಡಾನ್ಸ್ ಮಾಡಿದ್ದಾರೆ. ಇದೀಗ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗಾಯಕ ಅನಿರುದ್ದ್ ರವಿಚಂದರ್‌ ಅವರ ಹಾಡಿನೊಂದಿಗೆ ವೇದಿಕೆಗೆ ಆಗಮಿಸಿದ ಶಾರುಖ್‌ ಖಾನ್‌, ಅವರೊಂದಿಗೆ (ಅನಿರುದ್ದ್) ಡಾನ್ಸ್ ಮಾಡಲು ಪ್ರಾರಂಭಿಸಿದ್ದಾರೆ. ಶಾರುಖ್‌ ಡಾನ್ಸ್ ನೋಡಿ ಅಲ್ಲಿ ನೆರೆದಿದ್ದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿರುವ ದೃಶ್ಯಗಳು ವಿಡಿಯೊದಲ್ಲಿದೆ.

ಶಾರುಖ್‌ನ ಅಭಿಮಾನಿಗಳು ಚೆನ್ನೈಗೆ ಸ್ವಾಗತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಜವಾನ್ ಸಿನಿಮಾಕ್ಕೆ ನಟ ಕಮಲ್‌ ಹಾಸನ್ ವಿಡಿಯೊ ಮೂಲಕ ಶುಭಶಾಯ ತಿಳಿಸಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ‘ಜವಾನ್‘ ಅನ್ನು ಅಟ್ಲೀ ನಿರ್ದೇಶನ ಮಾಡಿದ್ದು, ಗೌರಿ ಖಾನ್‌ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಥ್ರಿಲ್ಲರ್‌ ಕಥಾಹಂದರವನ್ನು ಹೊಂದಿದೆ. ಚಿತ್ರತಂಡವು, ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಸರಿಪಡಿಸಲು ಹೊರಡುವ, ವ್ಯಕ್ತಿಯ ಭಾವನಾತ್ಮಕ ಸನ್ನಿವೇಶಗಳನ್ನು ತೆರೆ ಮೇಲೆ ತರುವ ಪ್ರಯತ್ನ ನಡೆಸಿದೆ.

ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ತೆರೆ ಮೇಲೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.