ADVERTISEMENT

Junior Cinema: ‘ಜೂನಿಯರ್‌’ ಟೀಸರ್‌ ರಿಲೀಸ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 23:56 IST
Last Updated 30 ಜೂನ್ 2025, 23:56 IST
ಜೆನಿಲಿಯಾ, ಕಿರೀಟಿ, ಶ್ರೀಲೀಲಾ 
ಜೆನಿಲಿಯಾ, ಕಿರೀಟಿ, ಶ್ರೀಲೀಲಾ    

‘ಮಾಯಾಬಜಾರ್‌’ ಖ್ಯಾತಿಯ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ನಿರ್ದೇಶನದ, ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ‘ಜೂನಿಯರ್‌’ ಜುಲೈ 18ರಂದು ತೆರೆಕಾಣಲಿದೆ. ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಯಿತು. 

‘ಲೆಟ್ಸ್‌ ಲಿವ್‌ ದಿಸ್‌ ಮೂಮೆಂಟ್‌’ ಎಂಬ ಹಾಡಿನ ಮೂಲಕ ಚಿತ್ರದ ಪ್ರಚಾರ ಆರಂಭಿಸಿದ್ದ ಚಿತ್ರತಂಡ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸುಮಾರು ಎರಡೂವರೆ ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾದ ಟೀಸರ್‌ ವಾರಾಹಿ ಚಲನಚಿತ್ರಂ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಮಾಸ್‌ ಜೊತೆಗೆ ಕ್ಲಾಸ್‌ ಅಂಶಗಳನ್ನು ಮಿಶ್ರಣ ಮಾಡಿ ಟೀಸರ್‌ ಕಟ್‌ ಮಾಡಲಾಗಿದೆ. ಭಾವನಾತ್ಮಕ ದೃಶ್ಯಗಳು, ಪ್ರೀತಿ ಹಾಗೂ ಆ್ಯಕ್ಷನ್‌ನ ಅಂಶಗಳು ಟೀಸರ್‌ನಲ್ಲಿದೆ. ಕಿರೀಟಿ ಡ್ಯಾನ್ಸ್‌, ಫೈಟ್‌, ಡೈಲಾಗ್‌ ಹೊಡೆಯುತ್ತಾ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಕಿರೀಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ರಿಲೀಸ್‌ ಆಗಲಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ, ‘ಬಾಹುಬಲಿ’ ಸಿನಿಮಾ ಖ್ಯಾತಿಯ ಕೆ.ಕೆ.ಸೆಂಥಿಲ್ ಕುಮಾರ್ ಛಾಯಾಚಿತ್ರಗ್ರಹಣ, ಪೀಟರ್ ಹೆನ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.