ದೇವರಾಜ್
ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಜತೆಯಾಗಿ ನಟಿಸಿರುವ ‘ಜಸ್ಟ್ ಮ್ಯಾರೀಡ್’ ಚಿತ್ರ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟ ದೇವರಾಜ್ ಕಾಣಿಸಿಕೊಂಡಿದ್ದಾರೆ. ಸಿ.ಆರ್.ಬಾಬಿ ಚಿತ್ರದ ನಿರ್ದೇಶಕರು.
ದೇವರಾಜ್ ಅವರು ನಿವೃತ್ತ ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೂರ್ಣಚಂದ್ರ ಅವರ ಪಾತ್ರದ ಹೆಸರು. ‘ಕರ್ತವ್ಯದಲ್ಲಿ ನ್ಯಾಯಾಧೀಶ, ಸ್ವಭಾವದಲ್ಲಿ ರಕ್ಷಕ, ನ್ಯಾಯಾಲಯದಲ್ಲಿಯೂ, ಮನೆಯಲ್ಲಿಯೂ ಕಾನೂನು ಪಾಲಿಸುವಂಥ ಪಾತ್ರ’ ಎಂದು ಚಿತ್ರತಂಡ ಹೇಳಿದೆ.
ಅಜನೀಶ್ ಲೋಕನಾಥ್, ಸಿ.ಆರ್.ಬಾಬಿ ಬಂಡವಾಳ ಹೂಡಿದ್ದಾರೆ. ‘ಪ್ರೇಮಕಥೆಯ ಚಿತ್ರವಾಗಿದ್ದರೂ, ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಇವೆ’ ಎಂದಿದ್ದಾರೆ ನಿರ್ದೇಶಕರು.
ಅಜನೀಶ್ ಸಂಗೀತ, ಪಿ.ಜಿ. ಛಾಯಾಚಿತ್ರಗ್ರಹಣ, ಶ್ರೀಕಾಂತ್ ಮತ್ತು ಪ್ರತೀಕ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.