ADVERTISEMENT

ಆ. 22ಕ್ಕೆ ಶೈನ್‌ ಶೆಟ್ಟಿ, ಅಂಕಿತಾ ನಟನೆಯ ‘ಜಸ್ಟ್‌ ಮ್ಯಾರೀಡ್‌’ ಸಿನಿಮಾ ರಿಲೀಸ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 23:42 IST
Last Updated 28 ಜುಲೈ 2025, 23:42 IST
   

‘ಬಿಗ್‌ಬಾಸ್‌’ ಖ್ಯಾತಿಯ ನಟ ಶೈನ್‌ ಶೆಟ್ಟಿ ಹಾಗೂ ‘ಇಬ್ಬನಿ ತಬ್ಬಿದ ಇಳೆಯಲಿ’ ಖ್ಯಾತಿಯ ಅಂಕಿತಾ ಅಮರ್‌ ನಟಿಸಿರುವ ‘ಜಸ್ಟ್‌ ಮ್ಯಾರೀಡ್‌’ ಸಿನಿಮಾ ಆಗಸ್ಟ್‌ 22ರಂದು ತೆರೆಕಾಣಲಿದೆ. 

ಈ ಸಿನಿಮಾವನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್.ಬಾಬಿ ಅವರು ಎಬಿಬಿಎಸ್‌ ಸ್ಟುಡಿಯೊಸ್‌ ಲಾಂಛನದಲ್ಲಿ ನಿರ್ಮಾಣ ಮಾಡಿದ್ದು, ಸಿ.ಆರ್ ಬಾಬಿ ಅವರೇ ಕಥೆ, ಚಿತ್ರಕಥೆ ಬರೆದು ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಈಗಾಗಲೇ ಟೀಸರ್‌ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರನ್ನು ತಲುಪಿರುವ ಈ ಸಿನಿಮಾದಲ್ಲಿ ಪ್ರೇಮಕಥೆಯೊಂದಿಗೆ ಕೌಟುಂಬಿಕ ಕಥೆಯೂ ಇದೆ. 

ADVERTISEMENT

ದೇವರಾಜ್, ಅಚ್ಯುತ್‌ ಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.