ADVERTISEMENT

ಮೇಕಪ್ ಇಲ್ಲ: ಕಾಜಲ್ ದಿಟ್ಟತನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:30 IST
Last Updated 4 ಜೂನ್ 2019, 19:30 IST
ಕಾಜಲ್ ಅಗರ್‌ವಾಲ್
ಕಾಜಲ್ ಅಗರ್‌ವಾಲ್   

ನಟಿಯರು ಅಂದ್ರೆ ಮೇಕಪ್ ಇರಲೇಬೇಕು. ನಿಜ ಜೀವನದಲ್ಲಿ ತಾರಾಮಣಿಯರು ಹೇಗಿರ್ತಾರೆ ಅಂತಾ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ಅದನ್ನು ತಿಳಿದುಕೊಳ್ಳುವ ಕುತೂಹಲವೂ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಆದರೆ ಮೇಕಪ್ ಇಲ್ಲಿದ ಫೋಟೊಗಳನ್ನು ಯಾವ ನಟಿಯರೂ ಪ್ರಕಟಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ತೆಲುಗು ನಟಿ ಕಾಜಲ್ ಅಗರ್‌ವಾಲ್ ಈ ವಿಚಾರದಲ್ಲಿ ಧೈರ್ಯ ತೋರಿದ್ದಾರೆ.ಅವರ ಮೇಕಪ್ ಇಲ್ಲದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸಹಜ ಫೋಟೋ ಜತೆಗೆ ಸಂದೇಶವೊಂದನ್ನು ಅವರು ಬರೆದಿದ್ದಾರೆ. ‘ಸೌಂದರ್ಯ ತೋರಿಕೆಯದ್ದು. ಜನರು ಕಾಸ್ಮೆಟಿಕ್ಸ್ ಮೂಲಕ ಅದನ್ನು ಸಾಧಿಸುತ್ತಾರೆ. ಹೆಚ್ಚು ಹಣವನ್ನೂ ಖರ್ಚು ಮಾಡುತ್ತಾರೆ. ಆದರೆ ಮೇಕಪ್‌ನಿಂದ ದೇಹದ ಸೌಂದರ್ಯ ಹೆಚ್ಚುತ್ತದೆಯೇ ಹೊರತು ವ್ಯಕ್ತಿತ್ವದ ಸೌಂದರ್ಯ ಅಲ್ಲ. ನಾವು ಹೇಗಿದ್ದೀವೋ ಹಾಗೆಯೇ ಪ್ರೀತಿಸಿದರೆ ಅದೇ ನಮ್ಮ ನಿಜವಾದ ಸೌಂದರ್ಯ’ ಎಂದು ಕಾಜಲ್ ಅಗರವಾಲ್ ಅಭಿಪ್ರಾಯಪಟ್ಟಿದ್ದಾರೆ.

ಜಾಹೀರಾತಿಗಾಗಿ ಅನಗತ್ಯವಾಗಿ ಮೇಕಪ್ ಮಾಡಿಕೊಳ್ಳುವುದಿಲ್ಲ ಎಂದು ನಟಿ ಸಾಯಿ ಪಲ್ಲವಿ ಇತ್ತೀಚೆಗೆ ದಿಟ್ಟತನ ಪ್ರದರ್ಶಿಸಿದ್ದರು.

ADVERTISEMENT

ಕಲಾವಿದರು ಹಾಗೂ ಅವರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳು ಸೇತುವೆಯಾಗಿ ನಿಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.