ADVERTISEMENT

ಕಮಲ್‌ಗೆ ಕನ್ನಡ ಪುಸ್ತಕ; ಇದು ನನ್ನ ಪ್ರತಿಭಟನೆ: ರಂಜನಿ ರಾಘವನ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:04 IST
Last Updated 2 ಜೂನ್ 2025, 14:04 IST
<div class="paragraphs"><p>ಕಮಲ್‌ ಹಾಸನ್‌ಗೆ ಕೃತಿಗಳನ್ನು ನೀಡಿದ ರಂಜನಿ ರಾಘವನ್‌&nbsp;</p></div>

ಕಮಲ್‌ ಹಾಸನ್‌ಗೆ ಕೃತಿಗಳನ್ನು ನೀಡಿದ ರಂಜನಿ ರಾಘವನ್‌ 

   

'ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದ್ದು' ಎನ್ನುವ ನಟ ಕಮಲ್‌ ಹಾಸನ್‌ ಅವರ ಮಾತು ವಿವಾದವಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ನಟಿ ನಿರ್ದೇಶಕಿ ರಂಜನಿ ರಾಘವನ್ ಅವರು ಕಮಲ್‌ ಹಾಸನ್‌ಗೆ ತಮ್ಮ ಕನ್ನಡ ಕೃತಿಗಳನ್ನು ನೀಡುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ.

‘ಕಮಲ್‌ ಸರ್‌ಗೆ ‘ಕನ್ನಡ’ ಪುಸ್ತಕ’ ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ ರಂಜನಿ. ತಮ್ಮ ‘ಸ್ವೈಪ್‌ ರೈಟ್‌’ ಹಾಗೂ ‘ಕಥೆ ಡಬ್ಬಿ’ ಪುಸ್ತಕಗಳನ್ನು ಕಮಲ್‌ ಹಾಸನ್‌ ಅವರಿಗೆ ರಂಜನಿ ನೀಡಿದ್ದಾರೆ. 

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಜನಿ ‘ನಾನು ನನ್ನ ಸಿನಿಮಾ ‘ಡಿಡಿ ಢಿಕ್ಕಿ’ಯ ಟೀಸರ್‌ ಒಂದನ್ನು ಕಮಲ್‌ ಹಾಸನ್‌ ಅವರ ಕೈಯಿಂದ ಲಾಂಚ್‌ ಮಾಡಿಸಬೇಕು ಎನ್ನುವ ಉದ್ದೇಶದಿಂದ ಮೂರ್ನಾಲ್ಕು ತಿಂಗಳ ಹಿಂದೆ ಹೋಗಿದ್ದೆ. ಆ ಸಂದರ್ಭದಲ್ಲೇ ನನ್ನ ಕೃತಿಗಳನ್ನು ನೀಡಿದ್ದೆ. ನನ್ನ ಸಿನಿಮಾ ಕಥೆ ಕೇಳಿ ಖುಷಿಪಟ್ಟು ಒಂದು ವಿಡಿಯೊ ಫೋಟೊ ನೀಡಿದ್ದರು. ಅದನ್ನು ಬಳಸಿಕೊಂಡು ನಾವು ಒಂದು ಕಾರ್ಯಕ್ರಮ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ಇದಕ್ಕಾಗಿ ಬಹಳ ಖರ್ಚು ಮಾಡಿದ್ದೆವು. ಇದೀಗ ಕಮಲ್‌ ಹಾಸನ್‌ ಅವರ ಹೇಳಿಕೆಯಿಂದ ನಮಗೂ ಬೇಸರವಾಗಿದೆ. ಇಂತಹ ಸಮಯದಲ್ಲಿ ಅವರನ್ನು ನಮ್ಮ ಸಿನಿಮಾಗಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದೆನಿಸಿದೆ. ಈ ಫೋಟೊಗಳನ್ನು ಈಗ ಹಂಚಿಕೊಂಡಿರುವುದಕ್ಕೂ ಕಾರಣವಿದೆ. ಕಮಲ್‌ ಹಾಸನ್‌ ಅವರ ಹೇಳಿಕೆಯನ್ನು ಈ ವಿಧಾನದಲ್ಲಿ ನಾನು ಪ್ರತಿಭಟಿಸಿದ್ದೇನೆ. ಜೊತೆಗೆ ಕನ್ನಡದ ಮೇಲಿನ ನನ್ನ ಪ್ರೀತಿ ಬೆಂಬಲವನ್ನು ವ್ಯಕ್ತಪಡಿಸುವ ರೀತಿಯೂ ಇದಾಗಿದೆ’ ಎಂದಿದ್ದಾರೆ.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.