
ಇತ್ತಿಚೀಗೆ ನಿಧನರಾದ ನಟಿ ಕಾಮಿನಿ ಕೌಶಲ್ (98) ಅವರನ್ನು ‘ಲೆಜೆಂಡರಿ ಕಲಾವಿದೆ’ ಹಾಗೂ ‘ಐಕಾನ್‘ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಬಣ್ಣಿಸಿದ್ದಾರೆ.
ಕಾಮಿನಿ ಕೌಶಲ್ ಕುರಿತು ಸಾಮಾಜಿಕ ಮಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಮಿತಾಭ್ ಬಚ್ಚನ್, 'ಕಾಮಿನಿ ಅವರು ನಮ್ಮ ಕುಟುಂಬದ ಸ್ನೇಹಿತೆ ಹಾಗೂ ಅತ್ಯುತ್ತಮ ಕಲಾವಿದೆ ಆಗಿದ್ದರು. ಅವರು ಬಾಲಿವುಡ್ ಸಿನಿಮಾ ರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಪಂಜಾಬ್ ವಿಭಜನೆಗೂ ಮುನ್ನ ಅವರ ಕುಟುಂಬಸ್ಥರು ನಮ್ಮ ಜತೆಯಲ್ಲಿ ಇದ್ದರು. ನಮ್ಮ ಸಹಪಾಠಿಯಾಗಿದ್ದ ಅವರ ಅಕ್ಕ ಅಪಘಾತದಲ್ಲಿ ನಿಧನರಾದರು’ ಎಂದು ಕಾಮಿನಿ ಅವರ ಕುಟುಂಬದ ಜತೆಗಿನ ನಂಟು ಹಂಚಿಕೊಂಡಿದ್ದಾರೆ.
‘ಕಾಮಿನಿ ಕೌಶಲ್ ಅತ್ಯಂತ ಪ್ರತಿಭಾನ್ವಿತ ಕಲಾವಿದೆ. ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲ, ನಮ್ಮ ಸ್ನೇಹಿತರ ಬಳಗದ ಸದಸ್ಯರು ಕೂಡ ಆಗಿದ್ದರು. ಉತ್ತಮ ಕಲಾವಿದರೆಲ್ಲರೂ ಒಬ್ಬೊಬ್ಬರಾಗಿ ನಮ್ಮನ್ನು ಅಗಲುತ್ತಿರುವುದು ಬೇಸರದ ಸಂಗತಿಯಾಗಿದೆ.’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದಕೊಂಡಿದ್ದಾರೆ.
ಕಾಮಿನಿ ಅವರು ‘ನೀಚಾ ನಗರ್’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಇವರು ದಿಲೀಪ್ ಕುಮಾರ್, ದೇವ್ ಆನಂದ್, ರಾಜ್ ಕಪೂರ್ ಸೇರಿದಂತೆ ಅನೇಕ ನಟರ ಜೊತೆ ಜತೆ ನಟಿಸಿದ್ದಾರೆ. ಕೊನೆಯದಾಗ 2022ರಲ್ಲಿ ಬಿಡುಗಡೆಯಾದ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.