ADVERTISEMENT

ಈ ವರ್ಷದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ತಾರೆಯರು ಇವರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2025, 12:35 IST
Last Updated 23 ಡಿಸೆಂಬರ್ 2025, 12:35 IST
<div class="paragraphs"><p>ಶಿವಕುಮಾರ್‌ ಹಾಗೂ ಮಾನಸ ಗುರುಸ್ವಾಮಿ,&nbsp;ಗಾಯಕ ಅನಿರುದ್ಧ ಶಾಸ್ತ್ರಿ, ಉಗ್ರಂ ಮಂಜು</p></div>

ಶಿವಕುಮಾರ್‌ ಹಾಗೂ ಮಾನಸ ಗುರುಸ್ವಾಮಿ, ಗಾಯಕ ಅನಿರುದ್ಧ ಶಾಸ್ತ್ರಿ, ಉಗ್ರಂ ಮಂಜು

   

ಈ ವರ್ಷ ಕೊನೆಗೊಳ್ಳಲು ದಿನಗಣನೆ ಶುರುವಾಗಿದೆ. ಈ ವರ್ಷದಲ್ಲಿ ಕನ್ನಡದ ಹಲವಾರು ನಟ, ನಟಿಯರು, ಕಿರುತೆರೆ ಕಲಾವಿದರ ನಿಶ್ಚಿತಾರ್ಥ ನಡೆದಿದೆ. ಅದರಲ್ಲೂ 2025ರಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಗಳ ಪಟ್ಟಿ ಇಲ್ಲಿವೆ.

ನಿಶ್ಚಿತಾರ್ಥ ಸಂಭ್ರಮದಲ್ಲಿ ‘ಉಗ್ರಂ’ ಮಂಜು 

ADVERTISEMENT

ಚಂದನವನದ ನಟ, ಬಿಗ್‌ಬಾಸ್‌ ಮಾಜಿ ಸ್ಪರ್ಧಿಯಾಗಿರುವ ಉಗ್ರಂ ಮಂಜು ಅವರು ಸಂಧ್ಯಾ ಖುಷಿ ಎಂಬುವವರ ಜೊತೆಗೆ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದರು.

ಶಿವು–ಮಾನಸ

ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಹಾಸ್ಯ ಕಲಾವಿದ ಶಿವಕುಮಾರ್‌ ಹಾಗೂ ಮಾನಸ ಗುರುಸ್ವಾಮಿ ನವೆಂಬರ್ 27ರಂದು ನಿಶ್ಚಿತಾರ್ಥ ನಡೆದಿತ್ತು.

ಗಾಯಕ ಅನಿರುದ್ಧ ಶಾಸ್ತ್ರಿ

‘ಸರಿಗಮಪ’, ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಾಯಕ ಅನಿರುದ್ಧ ಶಾಸ್ತ್ರಿ ಅವರು ನವೆಂಬರ್ 27ರಂದು ಶ್ರೇಯಾ ಬಾಲಾಜಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡರು.

ನಟಿ ಸುಷ್ಮಾ ಶೇಖರ್

‘ಲಕುಮಿ’, ‘ಯಾರೇ ನೀ ಮೋಹಿನಿ’ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದುಕೊಂಡಿದ್ದ ನಟಿ ಸುಷ್ಮಾ ಶೇಖರ್ ನವೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಯಿತು.

ನಟಿ ಸೌಮ್ಯ ಮೆಂಡನ್

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಸೌಮ್ಯ ಮೆಂಡನ್ ‘ಕಸ್ತೂರಿ ನಿವಾಸ’ ನಟ ಸುವೇದ್ ದಾಸ್‌ ಜೊತೆ ಉಂಗುರ ಬದಲಾಯಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.